ಹಿಜಾಬ್ ವಿವಾದ : ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್ ಬೆಂಗಳೂರು,ಫೆಬ್ರವರಿ,17,2022(..):ರಾಜ್ಯದಲ್ಲಿ ಸಂಘರ್ಷಕ್ಕೀಡಾಗಿರುವ ಹಿಜಾಬ್‌ ವಿವಾದ ಕುರಿತು ವಿಚಾರಣೆಯನ್ನು ಹೈಕೋರ್ಟ್‌ ನಾಳೆಗೆ ಮುಂದೂಡಿದೆ. ಹೈಕೋರ್ಟ್ ನ ಸಿಜೆ ರಿತುರಾಜ್‌ ಅವಸ್ತಿ , ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌, ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್‌ರ ಪೂರ್ಣ ಪೀಠ ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ನಾಳೆ ರಾಜ್ಯ ಸರ್ಕಾರದ ಪರ ವಕೀಲರಿಂದ ವಾದ ಮಂಡನೆ ಮಾಡಲಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಅರ್ಜಿದಾರರ ಪರ ವಕೀಲರಾದ ದೇವದತ್ ಕಾಮತ್ ಮತ್ತು ರವಿವರ್ಮ ಕುಮಾರ್ ಅವರು ತಮ್ಮ ವಾದ ಮಂಡಿಸಿದ್ದಾರೆ. : - - -