ಕಾಂಗ್ರೆಸ್ ಧರಣಿಗೆ ಜಗ್ಗಲ್ಲ ಬಗ್ಗಲ್ಲ: ರಾಜೀನಾಮೆಯೂ ನೀಡಲ್ಲ- ಸಚಿವ ಕೆ.ಎಸ್ ಈಶ್ವರಪ್ಪ. ಬೆಂಗಳೂರು,ಫೆಬ್ರವರಿ,17,2022(..):ಕಾಂಗ್ರೆಸ್‍ನವರು ನನ್ನ ವಿರುದ್ಧ ಎಷ್ಟೇ ಹೋರಾಟ, ಪ್ರತಿಭಟನೆ ನಡೆಸಿದರೂ ನಾನು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಧರಣಿಗೆ ಜಗ್ಗಲ್ಲ ಬಗ್ಗಲ್ಲ ಎಂದು ಗ್ರಾಮೀಣಾಭಿವೃದ‍್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ. ತಮ್ಮ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಡಿಕೆ ಶಿವಕುಮಾರ್ ಕುತಂತ್ರ ರಾಜಕಾರಣಕ್ಕೆ ನಾನು ಬಗ್ಗಲ್ಲ ಕಾಂಗ್ರೆಸ್ ರಾಷ್ಟ್ರಧ್ವಜವನ್ನ ರಾಜಕೀಯಕ್ಕೆ ಬಳಸಿಕೊಂಡಿದೆ. ಡಿಕೆಶಿ ರೀತಿ ಲೂಟಿ ಮಾಡಿ ನಾನು ಜೈಲಿಗೆ ಹೋಗಿಲಿಲ್ಲ ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದು ಕಾಂಗ್ರೆಸ್. ಡಿಕೆ ಶಿವಕುಮಾರ್ ರಾಷ್ಟ್ರಧ್ವಜವನ್ನ ಅವಮಾನಿಸಿದ್ದಾರೆ. ಸದದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇನೆ ಎಂದರು. ರಾಷ್ಟ್ರಧ್ವಜಕ್ಕೆ ನಾನು ಎಲ್ಲಿಯೂ ಅಪಮಾನ ಮಾಡಿಲ್ಲ. ನಾನು ಅಪ್ಪಟ ದೇಶಭಕ್ತ. ತ್ರಿವರ್ಣ ಧ್ವಜದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಕಾಂಗ್ರೆಸ್‍ ನವರು ರಾಜೀನಾಮೆ ಕೊಡು ಎಂದು ಕೇಳಿದ ತಕ್ಷಣ ನಾನೇಕೆ ಕೊಡಲಿ. ನನ್ನ ವಿರುದ್ಧ ಕಾಂಗ್ರೆಸ್‍ನವರು ಪ್ರತಿಭಟನೆಯನ್ನಾದರೂ ಮಾಡಲಿ, ಇನ್ನೇನಾದರೂ ಮಾಡಲಿ. ಅದಕ್ಕೆ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಕಾಂಗ್ರೆಸ್ ಎಲ್ಲಿವರೆಗೂ ಇರುತ್ತೋ ಗೊತ್ತಿಲ್ಲ ಧರಣಿ ಅವರು ಧರಣಿ ಮಾಡಿಕೊಂಡೇ ಇರಬೇಕು ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. : --- …. ‘ . ’- ’ ? .. , 17, 2022 (..): “ ’ ’ ,” .. . , “ ’ .. ’ . . . , .. . .”“ . . . ? , ’ ,” .: .. / / ’ / ’