ಹಿಜಾಬ್ ವಿವಾದ ತೀರ್ಪು ಬರುವವರೆಗೂ ಹಿಂದಿನ ಪದ್ಧತಿಯನ್ನೇ ಮುಂದುವರೆಸಿ- ಮಾಜಿ ಸಚಿವ ಯುಟಿ ಖಾದರ್ ಮೈಸೂರು,ಫೆಬ್ರವರಿ,13,2022(..):ಹಿಜಾಬ್ ವಿವಾದ ಕುರಿತು ಹೈಕೋರ್ಟ್ ತೀರ್ಪು ಬರುವವರೆಗೂ ಹಿಂದಿನ ಪದ್ಧತಿಯನ್ನೇ ಮುಂದುವರೆಸಿ ಎಂದು ಮಾಜಿ ಸಚಿವ ಯುಟಿ ಖಾದರ್ ಸಲಹೆ ನೀಡಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಯುಟಿ ಖಾದರ್, ಎಲ್ಲವನ್ನೂ ಕೋರ್ಟ್ ಬಗೆ ಹರಿಸಲು ಸಾಧ್ಯವಿಲ್ಲ ಸರ್ವಪಕ್ಷ ಸಭೆ ಕರೆದು ಚರ್ಚಿಸಬೇಖಕು. ಈ ಮೂಲಕ ಸರ್ಕಾರವೇ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು. ಶಾಸಕ ರಘುಪತಿ ಭಟ್ ಗೆ ಬೆದರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯುಟಿ ಖಾದರ್ ರಘುಪತಿ ಭಟ್ ಗೆ ರಕ್ಷಣೆ ಕೊಡಬೇಕು ಯಾರು ಯಾರಿಗೂ ಬೆದರಿಕೆ ಹಾಕಕೂಡದು. ಪರಿಹಾರದಲ್ಲಿ ಸಮಸ್ಯೆ ಸೃಷ್ಠಿಸುವವರು ಇದ್ದಾರೆ. ಶಿಕ್ಷಣ ನೀಡುವುದು ಪ್ರಾಥಮಿಕ ಜವಾಬ್ದಾರಿ ಎಂದರು. : – - -