ಬಿಜೆಪಿ ಸೇರಿರುವ ಬಾಂಬೆ ಬಾಯ್ಸ್ ಮತ್ತೆ ವಾಪಸ್ ಬರ್ತಾರೆ- ಸತೀಶ್ ಜಾರಕಿಹೊಳಿ ಹೊಸಬಾಂಬ್. ದಾವಣಗೆರೆ,ಫೆಬ್ರವರಿ,13,2022(..):ಬಿಜೆಪಿ ಸೇರಿರುವ ಬಾಂಬೆ ಬಾಯ್ಸ್ ಮತ್ತೆ ವಾಪಸ್ ಪಕ್ಷಕ್ಕೆ ಬರ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೊಸಬಾಂಬ್ ಸಿಡಿಸಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬಾಂಬೆಬಾಯ್ಸ್ ಮತ್ತೆ ಕಾಂಗ್ರೆಸ್ ಗೆ ಬರ್ತಾರೆ. ಚುನಾವಣೆ ಹತ್ತಿರ ಬರ್ತಿದಂತೆ ಬರ್ತಾರೆ. ರಾಜಕೀಯ ಅಂದ ಮೇಲೆ ಇದೆಲ್ಲಾ ಸಹಜ ಎಂದು ನುಡಿದರು. ಇನ್ನು ಸಿದ್ಧರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಇಬ್ರಾಹಿಂಗೆ ಟಾಂಗ್ ನೀಡಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಕಾಂಗ್ರೆಸ್ ನ ನಂಬರ್ ಒನ್ ಲೀಡರ್. ಮಾಸ್ ಲೀಡರ್ ಟಾಪ್ ಮೋಸ್ಟ್ ನಾಯಕ. ರಾಜ್ಯದಲ್ಲಿ ಸಿದ್ಧರಾಮಯ್ಯಗೆ ಅವರದ್ಧೆ ಆದ ವರ್ಚಸ್ಸು ಇದೆ ಎಂದರು. : --