ಇಸ್ರೋದಿಂದ ವರ್ಷದ ಮೊದಲ ಯಶಸ್ವಿ ಉಡಾವಣೆ: 3 ಉಪಗ್ರಹಗಳನ್ನು ಹೊತ್ತು ಸಾಗಿದ -C52 ಬೆಂಗಳೂರು, ಫೆಬ್ರವರಿ 14, 2022 (..):ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ ಇಂದು ಮುಂಜಾನೆ ಯಶಸ್ವಿಯಾಗಿ 2022ರ ಮೊದಲ ಉಡಾವಣೆ ಮಾಡಿದೆ. 3 ಉಪಗ್ರಹಗಳನ್ನು ಹೊತ್ತ -C52 ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಎಸ್‌ಎಆರ್ ನಿಂದ ಬೆಳಿಗ್ಗೆ5.59 ಕ್ಕೆ ಉಡಾವಣೆ ನಡೆಸಲಾಯಿತು. ನಾಲ್ಕು ಹಂತದ ರಾಕೆಟ್ ವಿದ್ಯಾರ್ಥಿ ಉಪಗ್ರಹ ಇನ್ ಸ್ಪೈರ್ ಸ್ಯಾಟ್ ಮತ್ತು ಇನ್ ಸ್ಯಾಟ್-2ಡಿಟಿ ಎಂದು ಕರೆಯಲ್ಪಡುವ ಬಾಹ್ಯಾಕಾಶ ನೌಕೆಯೊಂದಿಗೆ ಮೇಲಕ್ಕೆತ್ತಲ್ಪಟ್ಟಿತು. ಇದು ಭವಿಷ್ಯದಲ್ಲಿ ಭಾರತ-ಭೂತಾನ್ ಜಂಟಿ ಕಾರ್ಯಾಚರಣೆಯ ಪೂರ್ವಗಾಮಿಯಾಗಿದೆ ಎಂದು ಹೇಳಲಾಗಿದೆ. -C52 ರಾಕೆಟ್ (ಪೋಲಾರ್ ಉಪಗ್ರಹ ಉಡಾವಣಾ ವಾಹನ)ನಲ್ಲಿ ಭೂ ವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.