ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗ್ತಾರೆ-ಭವಿಷ್ಯ ನುಡಿದ ಸ್ವಾಮೀಜಿ. ಬಾಗಲಕೋಟೆ,ಫೆಬ್ರವರಿ,13,2022(..):ಸಚಿವ ಮುರುಗೇಶ್ ನಿರಾಣಿ ಅವರು ಮುಂದೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಸುರಪುರರದ ಸಾರಂಗ ದೇಶಿಕೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಮಾತನಾಡಿದ ಸಾರಂಗ ದೇಶಿಕೇಂದ್ರ ಸ್ವಾಮೀಜಿ, ಮುರುಗೇಶ್ ನಿರಾಣಿ ಅಂದ್ರೆ ಕಲ್ಲು ಸಕ್ಕರೆ ಇದ್ದಂತೆ. ಬಸವರಾಜ ಬೊಮ್ಮಾಯಿ ಬಳಿಕ ಮುರುಗೇಶ್ ನಿರಾಣಿ ಸಿಎಂ ಆಗುತ್ತಾರೆ. ನಿರಾಣಿ ಸರ್ಕಸ್ ಮಾಡುವ ಮಂತ್ರಿ ಅಲ್ಲ. ಎಷ್ಟೋ ಜನರು ಏನೇನೋ ಹೇಳ್ತಾರೆ. ಆದ್ರೆ ಮುಂದಿನ ದಿನಗಳಲ್ಲಿ ನೀವು ಮುಖ್ಯಮಂತ್ರಿ ಆಗ್ತೀರಿ ಎಂದು ಸಾರಂಗ ದೇಶಿಕೇಂದ್ರ ಸ್ವಾಮೀಜಿ ಗುಣಗಾನ ಮಾಡಿದರು. : - -