ನಾಳೆಯಿಂದ ಶಾಂತಿಯುತವಾಗಿ ಪ್ರೌಢಶಾಲಾ ತರಗತಿಗಳು ಆರಂಭ- ಸಿಎಂ ಬಸವರಾಜ ಬೊಮ್ಮಾಯಿ. ಹುಬ್ಬಳ್ಳಿ,ಫೆಬ್ರವರಿ,13,2022(..):ನಾಳೆಯಿಂದ ಶಾಂತಿಯುತವಾಗಿ ಪ್ರೌಢಶಾಲಾ ತರಗತಿಗಳು ಆರಂಭವಾಗಲಿದ್ದು ಇದನ್ನ ನೋಡಿಕೊಂಡು ಕಾಲೇಜು ಆರಂಭದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ನಾಳೆಯಿಂದ ಫ್ರೌಢ ಶಾಲೆಗಳನ್ನ ಆರಂಭಿಸುತ್ತೇವೆ. ಈಗಾಗಲೇ ಜಿಲ್ಲಾಧಿಕಾರಿಗಳು ಶಾಲೆ ಆಡಳಿತ ಮಂಡಳಿಗೆ ಶಾಂತಿ ಸಭೆಯ ಮಾಡಲು ತಿಳಿಸಿದ್ದೇನೆ. ನಾಳೆ ಶಾಂತಿಯುತವಾಗಿ ಎಲ್ಲಾ ತರಗತಿ ಆರಂಭವಾಗಲಿವೆ ಎಂದು ತಿಳಿಸಿದರು. ಮೊದಲಿನಂತೆ ಸೌಹಾರ್ಧಯುತವಾಗಿ ಶಾಲಾ ಕಾಲೇಜು ಆರಂಭವಾಗಲಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ನೀಡುವವರನ್ನ ಅಧಿಕಾರಿಗಳು ಗಮನಿಸುತ್ತಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. : - -