ಜುಲೈ 22ಕ್ಕೆ ರಣಬೀರ್ ಕಪೂರ್ ಅಭಿನಯದ ‘ಶಂಶೇರಾ’ ರಿಲೀಸ್ ಬೆಂಗಳೂರು, ಫೆಬ್ರವರಿ 12,2022 (..):ಬಾಲಿವುಡ್ ನಟ ರಣಬೀರ್ ಕಪೂರ್ – ವಾಣಿ ಕಪೂರ್ ಅಭಿನಯದ ‘ಶಂಶೇರಾ’ ಸಿನಿಮಾ ಜುಲೈ 22ರಂದು ಬಿಡುಗಡೆಯಾಗಲಿದೆ. ಈ ಕುರಿತು ಯಶ್‌ ರಾಜ್‌ ಬ್ಯಾನರ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದೆ. ‘ಜುಲೈ 22ರಂದು ‘ಶಂಶೇರಾ’ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ’ ಎಂದು ಬರೆದುಕೊಂಡಿದೆ.