ಎಲ್ಲ ದಾಖಲೆಗಳನ್ನು ಚಿಂದಿ ಉಡಾಯಿಸಿದ ಅಪ್ಪು ಜೇಮ್ಸ್ ಟೀಸರ್ ಬೆಂಗಳೂರು, ಫೆಬ್ರವರಿ 12,2022 (..):ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿದೆ. ಅಪ್ಪು ಕೊನೆ ಚಿತ್ರದ ಟೀಸರ್ ಅನ್ನು ಎಲ್ಲ ನಟ-ನಟಿಯರು ಮೆಚ್ಚು ಶೇರ್ ಮಾಡಿದ್ದಾರೆ. ಕಮಲ ನಗರದ ವೀರಭದ್ರೇಶ್ವರ ಥಿಯೇಟರ್ ಗೆ ಅಪ್ಪು ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಅಗ ಮಿಸಿದ್ದು, ಅಭಿಮಾನಿಗಳಿಗೋಸ್ಕರ ಈ ಟೀಸರ್ ಅರ್ಪಿಸಲಾಗಿದೆ ಎಂದು ಹೇಳಿದ್ದಾರೆ. ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು ಈ ಚಿತ್ರದ ಮೂಲಕ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಮಾರ್ಚ್ 17, ಪುನೀತ್ ಹುಟ್ಟುಹಬ್ಬದಂದೇ ‘ಜೇಮ್ಸ್’ ಬಿಡುಗಡೆಯಾಗಲಿ ಎಂದು ಚಿತ್ರತಂಡ ಪ್ರಕಟ ಮಾಡಿದೆ. ಟೀಸರ್ ಯೂಟ್ಯೂಬ್ ನಲ್ಲಿ ದಾಖಲೆ ಬರೆದಿದೆ.