ಕರಗ ಉತ್ಸವಕ್ಕೆ ಬಿಬಿಎಂಪಿ ಗ್ರೀನ್ ಸಿಗ್ನಲ್. ಬೆಂಗಳೂರು,ಫೆಬ್ರವರಿ,10,2022(..):ಕೊರೊನಾದಿಂದ ಎರಡು ವರ್ಷಗಳ ಕಾಲ ಬ್ರೇಕ್ ಬಿದ್ಧಿದ್ದ ಬೆಂಗಳೂರು ಕರಗ ಉತ್ಸವಕ್ಕೆ ಇದೀಗ ಈ ಬಾರಿ ಬಿಬಿಎಂಪಿ ಗ್ರೀನ್​ ಸಿಗ್ನಲ್​​​ ನೀಡಿದೆ. ಹೌದು ಬೆಂಗಳೂರು ಕರಗಕ್ಕೆ ಗ್ರೀನ್​ ಸಿಗ್ನಲ್​​​ ಸಿಕ್ಕಿದ್ದು, ಧರ್ಮರಾಯಸ್ವಾಮಿ, ದ್ರೌಪದಮ್ಮ ಉತ್ಸವಕ್ಕೆ ಬಿಬಿಎಂಪಿ ಅಧಿಕಾರಿಗಳು ಷರತ್ತು ಬದ್ದ ಅನುಮತಿ ನೀಡಿದ್ದಾರೆ. ಕೊರೋನಾ ಮಹಾಮಾರಿಯಿಂದ ಎರಡು ವರ್ಷಗಳಿಂದ ಕೊರೋನಾ ಯಾವುದೇ ಜಾತ್ರೆ ಸಮಾರಂಭಗಳಿಗೆ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆ ಸುಮಾರು 800 ವರ್ಷಗಳ ಇತಿಹಾಸವಿರುವ ಕರಗ ಉತ್ಸವಕ್ಕೆ ನಿರ್ಬಂಧ ಏರಲಾಗಿತ್ತು. ಇದೀಗ ಕೋವಿಡ್ ಪ್ರಮಾಣ ಕಡಿಮೆಯಾದ ಹಿನ್ನೆಲೆ ಕರಗ ಉತ್ಸವಕ್ಕೆ ಅನುಮತಿ ನೀಡಲಾಗಿದ್ದು, ಮಾರ್ಚ್​ 8ರಂದು ದ್ರೌಪದಮ್ಮ ಕರಗ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಪಾಲಿಕೆಗೆ ಕರಗ ಉತ್ಸವ ಸಮಿತಿ ಅಧ್ಯಕ್ಷ ಪಿ.ಅರ್.ರಮೇಶ್ ಪತ್ರ ಬರೆದಿದ್ದರು. ಸರ್ಕಾರದಿಂದಲೂ ಉತ್ಸವಕ್ಕೆ ಮೌಖಿಕ ಅನುಮತಿ ಸಿಕ್ಕಿದ್ದು, ಕರಗ ಉತ್ಸವದಲ್ಲಿ 50,000ಕ್ಕೂ ಹೆಚ್ಚು ಮಂದಿ ಭಾಗಿ ಸಾಧ್ಯತೆಗಳಿವೆ. : - – … , 10, 2022 (..): () , -19 . , . 800 . , . . 8, . .. . . 50,000 .: / / /