ಕೊರೊನಾ ಮೀಟರ್: ದೇಶದಲ್ಲಿ 67,597 ಮಂದಿ ಹೊಸ ಸೋಂಕಿತರು ಬೆಂಗಳೂರು, ಫೆಬ್ರವರಿ 08, 2022 (..):ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 67,597 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1,80,456 ಚೇತರಿಕೆ ಮತ್ತು 1,188 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳು 9,94,891 (2.35%) ಇದ್ದು, ಒಟ್ಟು ಸಾವಿನ ಸಂಖ್ಯೆ: 5,02,874 ಆಗಿದೆ. ದೈನಂದಿನ ಧನಾತ್ಮಕ ದರ 5.02% ರಷ್ಟು ಇದೆ. ಒಟ್ಟು 1,70,21,72,615 ಮಂದಿಗೆ ಲಸಿಕೆ ನೀಡಲಾಗಿದೆ.