ಕಾಂಗ್ರೆಸ್ ಸೇರುವುದು ವೈಎಸ್ ವಿ ದತ್ತಾ ಅವರಿಗೆ ಬಿಟ್ಟಿದ್ದು- ಮಾಜಿ ಸಿಎಂ ಸಿದ್ಧರಾಮಯ್ಯ. ಬೆಂಗಳೂರು,ಫೆಬ್ರವರಿ,7,2022(..):ವೈಎಸ್ ವಿ ದತ್ತಾ ಬೆಂಬಲಿಗರು ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎನ್ನುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ದತ್ತಾ ಅವರು ನಿರ್ಧಾರ ಮಾಡಬೇಕು ಎಂದು ಮಾಜಿ ಸಿಎಂ ಸಿದ‍್ಧರಾಮಯ್ಯ ತಿಳಿಸಿದರು. ವೈಎಸ್ ವಿ ದತ್ತಾ ಮಾಜಿ ಸಿಎಂ ಸಿದ‍್ಧರಾಮಯ್ಯರನ್ನ ಭೇಟಿಯಾಗಿದ್ದು, ಭೇಟಿ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಿದ್ಧರಾಮಯ್ಯ. ಕಾಂಗ್ರೆಸ್ ಸೇರುವುದು ದತ್ತಾ ಅವರಿಗೆ ಬಿಟ್ಟಿದ್ದು ಯಾರನ್ನೂ ಕಾಂಗ್ರೆಸ್ ಸೇರುವಂತೆ ಬಲವಂತ ಮಾಡಲ್ಲ. ದತ್ತಾ ಬೆಂಬಲಿಗರು ಸೇರಿಸಿಕೊಳ್ಳಿ ಎನ್ನುತ್ತಿದ್ದಾರೆ ದತ್ತಾ ಅವರು ಈ ಬಗ್ಗೆ ನಿರ್ಧಾರ ಮಾಡಲಿ ಎಂದರು. ನಾಳೆ ಗೋವಾ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ. ಎರಡು ದಿನ ಪ್ರಚಾರ ಮಾಡುವೆ. ಇನ್ನು ಸಿಎಂ ಇಬ್ರಾಹಿಂ ಜತೆ ಹೆಚ್.ಸಿ ಮಹದೇವಪ್ಪ ಮಾತನಾಡಿದ್ದಾರೆ ಎಲ್ಲರ ಜತೆ ಚರ್ಚಿಸುವುದಾಗಿ ಸಿಎಂ ಇಬ್ರಾಹಿಂ ಹೇಳಿದ್ದಾರೆ. ನಾನೂ ಮನೆಗೆ ಹೋಗಿ ಚರ್ಚಿಸುತ್ತೇನೆ ಜಾತ್ಯಾತೀತ ಸಿದ್ಧಾಂತದ ನಾವು ಒಗ್ಗಟ್ಟಾಗಿದ್ದೇವೆ ಎಂದು ಸಿದ‍್ಧರಾಮಯ್ಯ ತಿಳಿಸಿದರು. : -- - .