ಸಮವಸ್ತ್ರದ ವಿಚಾರವಾಗಿ ರಾಜ್ಯ ಸರ್ಕಾರದ ಆದೇಶ ಕಾನೂನು ಬಾಹಿರ- ಶಾಸಕ ತನ್ವೀರ್ ಸೇಠ್ ಟೀಕೆ. ಮೈಸೂರು,ಫೆಬ್ರವರಿ,7,2022(..):ರಾಜ್ಯದಲ್ಲಿ ಹಿಜಾಬ್ ವಿವಾದ ಕಾವೇರುತ್ತಿದ್ದಂತೆ ಸಮವಸ್ತ್ರ ಜಾರಿ ಮಾಡಿ ಸರ್ಕಾರ ಹೊರಡಿಸಿದ ಆದೇಶದ ಬಗ್ಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಸಮವಸ್ತ್ರದ ವಿಚಾರವಾಗಿ ರಾಜ್ಯ ಸರ್ಕಾರದ ಆದೇಶ. ಇದು ಕಾನೂನು ಬಾಹಿರವಾದ ಆದೇಶ. ಏಕಾಏಕಿಯಾಗಿ ಆದೇಶ ಹೊರಡಿಸಿದ್ದಾರೆ. ಇದು ಏಕಪಕ್ಷಿಯವಾದ ನಿರ್ಧಾರ ಇದು ಸರಿಯಲ್ಲ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಹಿಜಾಬ್ ವಿಚಾರ ನ್ಯಾಯಾಲಯದ ಮುಂದೆ ಇದೆ. ನ್ಯಾಯಾಲಯದ ಬೆಳವಣಿಗೆ ಕಾದು ನೋಡಬೇಕಿದೆ. ಮದ್ರಾಸ್ ಹೈ ಕೋರ್ಟ್ ಮಹಾರಾಷ್ಟ್ರದಲ್ಲಿ ಅವಕಾಶ ನೀಡಲಾಗಿದೆ. ಅದರ ಆದೇಶದ ಪ್ರತಿ ನಮ್ಮ ಬಳಿ ಇದೆ. ಇದೆಲ್ಲವನ್ನು ರಾಜಕೀಯ ದುರುದ್ದೇಶ ಹಾಗೂ ಓಟ್ ಬ್ಯಾಂಕ್‌ ಗಾಗಿ ಮಾಡಲಾಗುತ್ತಿದೆ ಎಂದರು. ಪ್ರತಾಪ್ ಸಿಂಹ ಸಹ ಮತಾಂತರ ಆಗಲಿ. ತನ್ವೀರ್ ಸೇಠ್ ಪೂರ್ವಜರು ಮತಾಂತರ ಆಗಿದ್ದರು ಎಂಬ ಸಂಸದ ಪ್ರತಾಪಸಿಂಹ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿಯಿಸಿದ ಶಾಸಕ ತನ್ವೀರ್ ಸೇಠ್, ಪ್ರತಾಪಸಿಂಹ ಸಹ ಮತಾಂತರ ಆಗಲಿ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು. ಸಂಸದ ಪ್ರತಾಪಸಿಂಹ ಯಾವ ಮನಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಮಾನಸಿಕ ಸಮತೋಲನ ಕಳೆದುಕೊಂಡಿರಬಹುದು. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬೇಕಾದರೆ ಅವರೇ ಮತಾಂತರ ಆಗಲಿ ಎಂದರು. ಆಪ್ತ ಶಾಹಿದ್ ಉಚ್ಚಾಟನೆಗೆ ಶಾಸಕ ತನ್ವೀರ್‌ಸೇಠ್ ಅಸಮಾಧಾನ. ಆಪ್ತ ಶಾಹಿದ್ ಉಚ್ಚಾಟನೆಗೆ ಅಸಮಾಧಾನ ಶಾಸಕ ತನ್ವೀರ್‌ಸೇಠ್, ಯಾವ ಶಕ್ತಿಯೂ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಫಲ ಕೊಡುವ ಮರಕ್ಕೇ ತಾನೆ ಜಾಸ್ತಿ ಕಲ್ಲೇಟು. ನನ್ನನ್ನ,ನನ್ನ ಬೆಂಬಲಿಗರನ್ನ ಟಾರ್ಗೆಟ್ ಮಾಡ್ತಿರೋದು ನಿಜ. ಮೇಯರ್ ಚುನಾವಣೆ ಬಳಿಕ ಈ ರೀತಿ ನಿರಂತರವಾಗಿ ನಡೆಯುತ್ತಿದೆ. ಯಾವ ಕಾರಣಕ್ಕೆ ಉಚ್ಚಾಟನೆ ಮಾಡಿದ್ದಾರೆ ಅಂತ ನನಗೆ ನಿಖರ ಮಾಹಿತಿ‌ ಇಲ್ಲ. ಆದರೆ ಪಕ್ಷದಲ್ಲಿ ದುಡಿದ ನಿಷ್ಟಾವಂತರನ್ನ ಈ ರೀತಿ ಉಚ್ಚಾಟನೆ ಮಾಡಿದ್ರೆ ಪಕ್ಷ ಸಂಘಟನೆ ಕಷ್ಟವಾಗುತ್ತೆ. ಇಬ್ರಾಹಿಂ ಸ್ವಾಗತಿಸಿದ್ದಕ್ಕೆ ಉಚ್ಚಾಟನೆ ಮಾಡುದ್ರಾ, ಬೇರೆ ಕಾರಣಕ್ಕೆ ಉಚ್ಚಾಟಿಸಿದ್ರಾ ಅಂತ ಪಕ್ಷದ ಅಧ್ಯಕ್ಷರನ್ನ ಕೇಳ್ತೀನಿ. ಈ ಸಂಬಂಧ ನಾನು ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕ ಸಿದ್ದರಾಮಯ್ಯರನ್ನ ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. : --