.. : ಇಂದಿನಿಂದ ಮೂಲಕ ಮುಂಗಡ ಟಿಕೆಟ್‌ ಮಾರಾಟ ಆರಂಭ. 2024 , .. 9 , ಮೈಸೂರು, ಸೆ.30,2024: 2024ರ ಮೈಸೂರು ಯುವ ದಸರಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಜೆಗೆ ಮುಂಗಡ ಟಿಕೆಟ್‌ ಗಳ ಮಾರಾಟ ಇಂದಿನಿಂದ ಆರಂಭ. ಅಕ್ಟೋಬರ್ 9 ರಂದು ಉತ್ತನಹಳ್ಳಿ ಮೈದಾನದಲ್ಲಿ ರೆಹಮಾನ್‌ ಮತ್ತು ತಂಡದ ಸಂಗೀತ ಸಂಜೆ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಬುಕ್‌ ಮೈ ಶೋ ಆಪ್‌ ( ) ಮೂಲಕ ಮುಂಗಡ ಟಿಕೆಟ್‌ ಮಾರಾಟ ಆರಂಭ. ಈ ಬಗ್ಗೆ “ಜಸ್ಟ್‌ ಕನ್ನಡ” ಗೆ ಮಾಹಿತಿ ನೀಡಿದ ದಸರಾ ಸಮಿತಿ ಮುಖ್ಯಸ್ಥರು ಆದ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್‌ ರೆಡ್ಡಿ, ಈ ವರ್ಷದ ಯುವ ದಸರಾ ಕಾರ್ಯಕ್ರಮವು ಅಕ್ಟೋಬರ್ 6 ರಿಂದ 10ರವರೆಗೆ ನಡೆಯಲಿದ್ದು, ಇಳಯರಾಜಾ (ಅಕ್ಟೋಬರ್ 10), ಶ್ರೇಯ ಘೋಷಾಲ್ (ಅಕ್ಟೋಬರ್ 6), ರವಿ ಬಸ್ರೂರ್‌ ( ಅಕ್ಟೋಬರ್ ೭ )ಹಾಗೂ ಬಾದ್‌ಷಾ (ಅಕ್ಟೋಬರ್ 8) ಮುಂತಾದ ಕಲಾವಿದರು ತಮ್ಮ ಪ್ರದರ್ಶನದಿಂದ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭಗೊಂಡಿದೆ. ಎ.ಆರ್.‌ ರೆಹಮಾನ್‌ ಅವರ ಕಾರ್ಯಕ್ರಮದ ಟಿಕೆಟ್‌ ಗಳನ್ನು ಎಕ್ಸ್‌ ಕ್ಲೂಸಿವ್‌ ಆಗಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ ಕಾರಣ, ಇಂದಿನಿಂದ ಬುಕ್‌ ಮೈ ಶೋ ನಲ್ಲಿ ಟಿಕೆಟ್‌ ಮಾರಾಟಗೊಳ್ಳಲಿದೆ ಎಂದರು. ಕಾರ್ಯಕ್ರಮದಲ್ಲಿ 1 ಲಕ್ಷ ಜನರು ಉಚಿತವಾಗಿ ಭಾಗವಹಿಸಬಹುದಾಗಿದೆ, ಜತೆಗೆ ವಿಶೇಷ ಆಸನ ವ್ಯವಸ್ಥೆಯನ್ನು ಈ ವರ್ಷದಿಂದ ಪ್ರಥಮ ಬಾರಿಗೆ ಪರಿಚಯಿಸಲಾಗಿದೆ, ಪ್ರೀಮಿಯಂ ಆಸನಗಳಿಗೆ ಟಿಕೆಟ್‌ಗಳು ರೂ. 8,000 ಮತ್ತು ರೂ. 5,000 ದರದಲ್ಲಿವೆ ಎಂದರು. : 2024 , .. , , : 2024 , .. 9 , . ’ ( 10), ( 6), ( 8). , 6 10, , , , . , , .