ಚಿತ್ರ ಮಂದಿರ, ಈಜುಕೊಳ, ಜಿಮ್ ಗಳಲ್ಲಿ ನಾಳೆಯಿಂದಲೇ ಶೇ.100 ಜನರಿಗೆ ಅವಕಾಶ – ಸಚಿವ ಸುಧಾಕರ್ ಬೆಂಗಳೂರು,ಫೆಬ್ರವರಿ,4,2022(..):ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೋವಿಡ್ ನಿಯಮಗಳನ್ನ ಸಡಿಲಗೊಳಿಸುತಿದ್ದು ಇದೀಗ ಚಿತ್ರ ಮಂದಿರ, ಈಜುಕೊಳ, ಜಿಮ್ ನಾಳೆಯಿಂದಲೇ ಶೇ.100 ಜನರಿಗೆ ಅವಕಾಶ ನೀಡಿದೆ. ಸಿಎಂ ಬಸವರಾಜ ಬೊಮ್ಮಾಯಿ‌ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಶನಿವಾರದಿಂದಲೇ ಶೇ.100 ಸೀಟುಗಳ ಭರ್ತಿಗೆ ಅನುಮತಿ ನೀಡಿದೆ. ಸಭೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಯೋಗ ಕೇಂದ್ರ, ಈಜುಗೊಳ, ಜಿಮ್ ಸೆಂಟರ್​ಗಳಲ್ಲಿ ನಾಳೆಯಿಂದಲೇ ಶೇ 100 ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತದೆ. ಭರ್ತಿಗೂ ಒಪ್ಪಿಗೆ ನೀಡಿದ್ದು, ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಕಡ್ಡಾಯಗೊಳಿಸಲಾಗಿದೆ ಎಂದರು. ಚಿತ್ರಮಂದಿರಗಳ ಒಳಗೆ ಪ್ರೇಕ್ಷಕರು ಯಾವುದೇ ತಿಂಡಿ, ತಿನಿಸು ಪದಾರ್ಥ ಕೊಂಡೊಯ್ಯುವಂತಿಲ್ಲ. ಮಾಸ್ಕ್ ಧರಿಸುವುದು‌ ಕಡ್ಡಾಯ. ಈ ಸಂಬಂಧ ವಿಸ್ತೃತ ಮಾರ್ಗಸೂಚಿಯನ್ನು ಇಂದು ಪ್ರಕಟಿಸಲಾಗುತ್ತೆ. ಸಿನಿಮಾ ಟಾಕೀಸ್, ಜಿಮ್, ಈಜುಕೊಳ ಮಾಲೀಕರು ಈ ನಿಯಮಗಳ ಪಾಲನೆ, ನಿಗಾ ಎರಡನ್ನೂ ಮಾಡಬೇಕು. ಇಲಾಖೆ ಅಧಿಕಾರಿಗಳು ಆಗಾಗ್ಗೆ ಭೇಟಿ ನೀಡಿ ತಪಾಸಣೆ ಮಾಡಲಿದ್ದಾರೆ ಎಂದು ಡಾ.ಸುಧಾಕರ್ ತಿಳಿಸಿದರು. ರಾಜ್ಯ ಸರ್ಕಾರ ನಿಯಮ ಪಾಲಿಸಬೇಕು. ಎರಡು ಡೋಸ್ ಲಸಿಕೆ ಪಡೆದಿರಬೇಕು. ಎಲ್ಲಾ ನಿರ್ಬಂಧಗಳನ್ನ ಹಿಂಪಡೆಯಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು. : 100 - – – - -