ಎನ್ ಟಿಎಂ ಎಸ್ ಶಾಲೆ‌ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ: ಮಾಜಿ ಶಾಸಕ ಸೇರಿ ಹಲವರ ಬಂಧನ. ಮೈಸೂರು,ಫೆಬ್ರವರಿ,4,2022(..):ಮೈಸೂರಿನಲ್ಲಿ ಎನ್ ಟಿಎಂ ಎಸ್ ಶಾಲೆ‌ ಸ್ಥಳಾಂತರ ಮಾಡಿದ್ದನ್ನು ವಿರೋಧಿಸಿ ಎನ್ ಟಿಎಂಎಸ್ ಶಾಲೆ‌ ಉಳಿಸಿ ಹೋರಾಟ ಸಮಿತಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದಲ್ಲಿ ಶಾಲೆ ಮುಂಭಾಗದ ರಸ್ತೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪ್ರಥಮ ಕನ್ನಡ ಶಾಲೆ ಉಳಿಯಲಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕನ್ನಡ ಪರ ಹೋರಾಟಗಾರು, ಸ್ಥಳೀಯ ರೈತ ಮುಖಂಡರು ಸೇರಿ ಹಲವರು ಭಾಗಿಯಾಗಿದ್ದರು. ಇದೇ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಎಂಕೆ ಸೋಮಶೇಖರ್ ಇವರ ಜತೆ ಕೆಲ ಹೋರಾಟಗಾರರನ್ನ ಪೊಲೀಸರು ಬಂಧಿಸಿದರು ನಂತರ ಶಾಂತಿಯುತ ಹೋರಾಟಕ್ಕೆ ಅನುವು ಮಾಡಿಕೊಟ್ಟರು. ಪೋಲಿಸ್ ಬಂದೋಬಸ್ತ್ ನಲ್ಲಿ ಎನ್ ಟಿ ಎಂ ಎಸ್ ಶಾಲಾ ಮಕ್ಕಳಿಗೆ ತರಗತಿ ಆರಂಭ. ಮಹಾರಾಣಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಕಟ್ಟಡದಲ್ಲಿ ಪೋಲಿಸ್ ಬಂದೂಬಸ್ತ್ ನಲ್ಲಿ ಎನ್ ಟಿ ಎಂ ಎಸ್ ಶಾಲಾ ಮಕ್ಕಳಿಗೆ ತರಗತಿ ಆರಂಭವಾಗಿದ್ದು, ಮಕ್ಕಳಿಗೆ ಡಿಡಿಪಿಐ ರಾಮಚಂದ್ರರಾಜೆ ಅರಸ್ ಸಿಹಿ ವಿತರಿಸಿದರು. ಈ ಕುರಿತು ಮಾತನಾಡಿದ ಅವರು, ಸರ್ಕಾರ ಆದೇಶದಂತೆ ಶಾಲೆ ಸ್ಥಳಾಂತರ ಮಾಡಿದ್ದೇವೆ. ಇದು ಎನ್ ಟಿಎಂ ಎಸ್ ಶಾಲೆಯ ಮೂಲ ಕಟ್ಟಡ. ಮೊದಲು ಶಾಲೆ ಆರಂಭವಾಗಿದ್ದೆ ಇಲ್ಲಿಯೇ ಈಗ ಮತ್ತೆ ಮೂಲ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದೇವೆ. ಸರ್ಕಾರಿ ಮಹಾರಾಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೆಸರಿನಲ್ಲಿ ನಡೆಯುತ್ತಿದೆ. ಎಲ್ಲಾ ಸುಸಜ್ಜಿತ ವ್ಯವಸ್ಥೆ ಮಾಡಿಕೊಡಲಾಗುವುದು. ಶಿಕ್ಷಣ ಸಚಿವರು ಕೂಡ ಶಾಲೆ ಅಭಿವೃದ್ಧಿ ಕುರಿತು ಯೋಜನೆ ರೂಪಿಸಿ ಸರ್ಕಾರಕ್ಕೆ ಕಳಹಿಸಿಕೊಡುವಂತೆ ಸೂಚಿಸಿದ್ದಾರೆ.. ಎನ್ ಟಿ ಎಂ ಶಾಲೆ ಮುಚ್ಚಿಲ್ಲ. ಮುಂದುವರೆದಿದೆ‌ ಎಂದು ಡಿಡಿಪಿಐ ರಾಮಚಂದ್ರರಾಜೆ ಅರಸ್ ಹೇಳಿದರು. : - - - … : , 4, 2022 (..): ‘ ,’ . .. . . . ’ . . , , “ . . , . . . . ,” .: / / /