ಪ್ರೀತಿಯಲಿ ಬಿದ್ದ ಡಾಲಿ-ಅಮೃತ!? ಸ್ಪಷ್ಟನೆ ನೀಡಿದ ಅಮೃತಾ ಅಯ್ಯಂಗಾರ್ ಬೆಂಗಳೂರು, ಫೆಬ್ರವರಿ 02, 2022 (..):ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್, ನಟಿ ಅಮೃತಾ ಅಯ್ಯಂಗಾರ್ ಗೆ ಪ್ರಪೋಸ್ ಮಾಡಿದ್ದು ಸಖತ್ ಸುದ್ದಿಯಾಗಿತ್ತು. ಈ ರಿಯಾಲಿಟಿ ಶೋನಲ್ಲಿ ಇಬ್ಬರೂ ಪ್ರಪೋಸ್ ಮಾಡಿರುವುದು ನೋಡಿ ನೆಟ್ಟಿಗರು ಇಬ್ಬರೂ ನಿಜವಾಗಿಯೂ ಪ್ರೀತಿಸುತ್ತಿದ್ದಾರೆಯೇ ಎಂಬ ಗಾಸಿಪ್ ಹರಿದಾಟಿತ್ತು. ಈ ಕುರಿತು ಸಾಕಷ್ಟು ಗುಸುಗುಸು ಮಾತುಗಳು ಕೇಳಿ ಬಂದಿದ್ದವು. ಇದೀಗ ಆ ಕುರಿತು ನಟಿ ಅಮೃತ ಸ್ಪಷ್ಟನೆ ನೀಡಿದ್ದಾರೆ. ಡಾಲಿ ಅಭಿನಯಿಸಿದ್ದು ನೋಡಿ ನಾನು ಭಾವುಕಳಾಗಿದ್ದೆ. ನಮ್ಮಿಬ್ಬರ ನಡುವೆ ನಿಜವಾಗಿಯೂ ಪ್ರೀತಿ-ಪ್ರೇಮವಿಲ್ಲ ಎಂದಿದ್ದಾರೆ.