ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ನಿಧನ. ಬೆಂಗಳೂರು,ಫೆಬ್ರವರಿ,2,2022(..):ಕ್ಯಾನ್ಸರ್​ನಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ನಿಧನರಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಹಿರಿಯ ನಟ ಅಶೋಕ್​ ರಾವ್​ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ 75 ವರ್ಷ ವಯಸ್ಸಾಗಿತ್ತು. ರಾತ್ರಿ 12.30ರ ವೇಳೆಗೆ ಅಶೋಕ್ ರಾವ್ ನಿಧನರಾಗದ್ದಾರೆ ಎನ್ನಲಾಗಿದೆ. ಪತ್ನಿ, ಮಗಳು ಹಾಗೂ ಮಗನನ್ನು ಅಶೋಕ್​ ರಾವ್​ ಅಗಲಿದ್ದಾರೆ. ಡಾ. ರಾಜ್​ಕುಮಾರ್​ ಸೇರಿದಂತೆ ಅನೇಕ ಸ್ಟಾರ್​ ಕಲಾವಿದರ ಜೊತೆ ಅಶೋಕ್​ ರಾವ್​ ತೆರೆಹಂಚಿಕೊಂಡಿದ್ದರು. ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅವರ ಅನುಭವ ಅಪಾರ. ನಿನ್ನೆ ರಾತ್ರಿಯವರೆಗೂ ಚೆನ್ನಾಗಿದ್ದರು. ಆದರೆ ಈಗ ಅವರು ನಿಧನರಾಗಿರುವುದು ನೋವಿನ ಸಂಗತಿ. ಹೃದಯಾಘಾರದಿಂದ ಅಶೋಕ್​ ರಾವ್​ ಮೃತರಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಡಾ. ರಾಜ್​ಕುಮಾರ್​ ನಟನೆಯ ‘ಪರಶುರಾಮ್​’ ಸಿನಿಮಾದಲ್ಲಿ ಅಶೋಕ್ ರಾವ್ ಖಳ ನಟನಾಗಿ ಅವರು ಗಮನ ಸೆಳೆದಿದ್ದರು. ಅಶೋಕ್​ ರಾವ್​ ಅವರ ಪ್ರತಿಭೆಯನ್ನು ಗಮನಿಸಿದ್ದ ರಾಜ್​ಕುಮಾರ್​ ಅವರೇ ಕರೆದು ‘ಪರಷುರಾಮ್​’ ಸಿನಿಮಾದ ವಿಲನ್​ ಪಾತ್ರವನ್ನು ಅವರಿಗೆ ನೀಡಿದ್ದರು. ಹಲವು ವರ್ಷಗಳ ತಮ್ಮ ಸಿನಿಮಾ ಜರ್ನಿಯಲ್ಲಿ ಅಶೋಕ್​ ರಾವ್​ ಅವರು ಅನೇಕ ಬಗೆಯ ಪಾತ್ರಗಳನ್ನು ಮಾಡಿದ್ದರು. ವಿಲನ್​ ಪಾತ್ರಗಳ ಮೂಲಕ ಅಶೋಕ್ ರಾವ್ ಮಿಂಚಿದ್ದರು. : - - … , 2, 2022 (..): ’ . . . 75 . 12.30 . , , . . . 2.30 .: /