ಇಂದಿನಿಂದ ಮೈಸೂರಿನಲ್ಲಿ ಆಟೋ ಬಾಡಿಗೆ ದರ ಹೆಚ್ಚಳ. ಮೈಸೂರು,ಫೆಬ್ರವರಿ,1,2022(..):ಪೆಟ್ರೋಲ್ ಹಾಗೂ ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆ ಹಿನ್ನಲೆ ಆಟೋ ಬಾಡಿಗೆ ದರ ಹೆಚ್ಚಿಸುವಂತೆ ಆಟೋ ಚಾಲಕರು ಸಲ್ಲಿಸಿದ್ದ ಮನವಿಗೆ ಮೈಸೂರು ಜಿಲ್ಲಾಡಳಿತ ಸ್ಪಂದಿಸಿದ್ದು ದರ ಪರಿಷ್ಕರಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದಿನಿಂದ ಆಟೋ ಬಾಡಿಗೆ ದರ ಹೆಚ್ಚಳವಾಗಲಿದೆ. ಕನಿಷ್ಠ 2 ಕಿ.ಮೀಗೆ 30 ರೂ. ನಂತರ ಪ್ರತಿ ಕಿಮೀಗೆ 15 ರೂ. ದರ ನಿಗದಿ ಮಾಡಲಾಗಿದೆ. ಹಾಗೆಯೇ ಮೊದಲ 5 ನಿಮಿಷ ಕಾಯಲು ಫ್ರೀ, ನಂತರದ ಪ್ರತೀ 15ನಿಮಿಷಕ್ಕೆ 5 ರೂ. ದರ, 20 ಕೆಜಿ ವರೆಗಿನ ಲಗೇಜ್ ಗೆ ಉಚಿತ. ನಂತರದ 20 ಕೆಜಿಗೆ 5 ರೂ. ದರ ನಿಗದಿಗೊಳಿಸಲಾಗಿದೆ. ರಾತ್ರಿ 10 ಗಂಟೆ ಬಳಿಕ ಸಾಮಾನ್ಯದರದೊಂದಿಗೆ ಅರ್ಧ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ. ಇನ್ನು ದರ ಪರಿಷ್ಕರಣೆ ಕುರಿತು ಆಟೋ ಚಾಲಕರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಡಿಸಿ ಅನುಮತಿ ಬಳಿಕ ಆಟೋ ದರ ಪರಿಷ್ಕರಿಣೆ ಮಾಡಲಾಗಿದೆ. : –- –- … , 1, 2022 (..): ., . 2 .30 . 15 . 15 5 .5. 20 . 20 . 5 . 10.00 --- .: / /