ಮೈಸೂರು ವಿವಿಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಭರ್ತಿಯಾಗದ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ. ಮೈಸೂರು,ಫೆಬ್ರವರಿ,1,2022(..):ಮೈಸೂರು ವಿಶ್ವ ವಿದ್ಯಾನಿಲಯವು 2021–22ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳಿಗೆ ಭರ್ತಿಯಾಗದ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಕುಲಪತಿಗಳ ಅನುಮೋದನೆ ಮೇರೆಗೆ 2021-22ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಾತಿ ನೀಡಲಾಗಿದ್ದು, ಭರ್ತಿಯಾಗದ ಸೀಟುಗಳಿಗೆ ಭರ್ತಿ ಮಾಡಲು ತೀರ್ಮಾನಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಈ ಕೆಳಕಂಡ ಕ್ರಮಗಳನ್ನು ವಹಿಸುವಂತೆ ತಿಳಿಸಿದೆ. ಅಧ್ಯಯನ ವಿಭಾಗಗಳ ಪ್ರವೇಶಾತಿ ಸಮಿತಿ ಅಧ್ಯಕ್ಷರು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಪ್ರವೇಶಾತಿ ನೀಡುವುದು. ದಿನಾಂಕ 07-02-2022 ರಿಂದ 09-02-2022ರ ಸಾಯಂಕಾಲ 5-00 ಗಂಟೆಯೊಳಗೆ ಹೊಸದಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ (), ಬದಲಾವಣೆಗಳಿದ್ದಲ್ಲಿ ನಲ್ಲಿಯೇ ಆಳವಡಿಸುವುದು. : - – –