ಆಸ್ಟಿಯೋಸಾರ್ಕೋಮ ಖಾಯಿಲೆಯಿಂದ ಬಳಲುತ್ತಿರುವ 19 ವರ್ಷದ ಸಾಯಿ ಚರಣ್‌ ನ ಚಿಕಿತ್ಸೆಗೆ ಸಹಾಯ ಮಾಡಿ ಬೆಂಗಳೂರು, ಫೆಬ್ರವರಿ ,1, 2022 (..):ಬೆಂಗಳೂರಿನ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಸ್ಟಿರೊಸಾರ್ಕೊಮ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಸಾಯಿ ಚರಣ್ ಎಂಬ 19 ವರ್ಷ ವಯಸ್ಸಿನ ಬಾಲಕನಿಗೆ ವೈದ್ಯಕೀಯ ಚಿಕಿತ್ಸೆಗೆ ಸಾರ್ವಜನಿಕರಿಂದ ಹಣಸಹಾಯ ಕೋರಲಾಗಿದೆ. ಸಾಯಿ ಚರಣ್ ಆಸ್ಟಿರೊಸಾರ್ಕೊಮ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ೧೫ ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸಾಯಿ ಚರಣ್ ಕುಟುಂಬಸ್ಥರು ಅಷ್ಟು ಹಣ ಹೊಂದಿಸುವ ಪರಿಸ್ಥಿತಿಯಲ್ಲಿಲ್ಲ. ಈಗಾಗಲೇ ಸಂಬಂಧಿಕರು ಮತ್ತು ಸ್ನೇಹಿತರಿಂದ ಸಾಧ್ಯವಿರುವಷ್ಟು ಹಣ ಹೊಂದಿಸಿ ಪಾವತಿಸಿದ್ದಾರೆ. ಚಿಕಿತ್ಸೆಗೆ ಬೇಕಾಗಿರುವ ಮೊತ್ತ ದೊಡ್ಡ ಮೊತ್ತವಾದ್ದರಿಂದ ಕುಟುಂಬಸ್ಥರು ಸಾರ್ವಜನಿಕರಿಂದ ಹಣಕಾಸಿನ ನೆರವನ್ನು ಯಾಚಿಸಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿಸಬಹುದು. / .: 6999413500567593 / : – / : : YESB0CMSNOC ಸುದ್ದಿ ಮೂಲ: ಕೆಟ್ಟೊ : – - –