ಗಾಳಿಪಟ-2 ಸ್ಯಾಟಲೈಟ್-ಡಿಜಿಟಲ್ ಹಕ್ಕೂ ಭಾರಿ ಮೊತ್ತಕ್ಕೆ ಮಾರಾಟ ! ಬೆಂಗಳೂರು, ಫೆಬ್ರವರಿ 01, 2022 (..):ಗಾಳಿಪಟ-2 ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ. ಹೌದು. ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಮತ್ತು ದಿಗಂತ್ ನಟನೆಯ ರೊಮ್ಯಾಂಟಿಕ್ ಸಿನಿಮಾ ಗಾಳಿಪಟ-2 ರಿಲೀಸ್ ಗೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ. 2008 ರಲ್ಲಿ ಈ ಮೂವರ ಕಾಂಬಿನೇಷನ್ ನ ಗಾಳಿಪಟ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಇದರ ಮುಂದಿನ ಭಾಗ ರೆಡಿಯಾಗುತ್ತಿದೆ. ಚಿತ್ರದ ಕುರಿತು ಹೊಸ ಸುದ್ದಿ ಏನೆಂದರೆ ಗಾಳಿಪಟ-2 ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ.