ಅಕ್ಷಯ್ ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ‘ರಾಮ್ ಸೇತು’ ರಿಲೀಸ್ ಡೇಟ್ ಫಿಕ್ಸ್ ಬೆಂಗಳೂರು, ಫೆಬ್ರವರಿ 01, 2022 (..):ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅಕ್ಷಯ್‌ ನಟಿಸಿರುವ ‘ರಾಮ್‌ ಸೇತು’ ಸಿನಿಮಾ ದೀಪಾವಳಿ ದಿನವೇ ಬಿಡುಗಡೆಯಾಗಲಿದೆ. ಹೌದು. ಈ ದೀಪಾವಳಿಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ರಿಂದ ಅಭಿಮಾನಿಗಳಿಂದ ಉಡುಗೊರೆಯೊಂದು ಸಿಗಲಿದೆ. ಈ ಬಗ್ಗೆ ನಟ ಟ್ವಿಟರ್‌ನಲ್ಲಿ ಮಾಹಿತಿ ಕೊಟ್ಟಿದ್ದು, ಸಿನಿಮಾ ಸೆಟ್‌ನ ವಿಡಿಯೋವೊಂದನ್ನೂ ಹಂಚಿಕೊಂಡಿದ್ದಾರೆ. ಈ ಮೂಲಕ ಬಹಳ ದಿನಗಳ ಬಳಿಕ ಅಕ್ಕಿ ಸಿನಿಮಾ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.