ಅಪ್ಪು ಜೇಮ್ಸ್’ಗಾಗಿ ರಿಲೀಸ್ ಡೇಟ್ ಚೇಂಜ್ ! ಬೆಂಗಳೂರು, ಫೆಬ್ರವರಿ 01, 2022 (..):ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಚಿತ್ರ “ಜೇಮ್ಸ್‌’ ಮಾರ್ಚ್‌ 17ರಂದು ತೆರೆ ಕಾಣಲಿದೆ. ವಿಶೇಷ ಎಂದರೆ ಅಪ್ಪು ಚಿತ್ರಕ್ಕಾಗಿ ಆರ್ ಆರ್ ಆರ್ ಚಿತ್ರದ ರಿಲೀಸ್ ದಿನಾಂಕವನ್ನು ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದೆ. ಮಾರ್ಚ್‌ 18ಕ್ಕೆ ರಾಜಮೌಳಿ ಅವರ ಬಹುನಿರೀಕ್ಷಿತ “ಆರ್‌ಆರ್‌ಆರ್‌’ ಕೂಡ ಬಿಡುಗಡೆಯಾಗಲಿದ್ದು, ಜೇಮ್ಸ್‌ ಹಾಗೂ ಆರ್‌ಆರ್‌ಆರ್‌ ಚಿತ್ರಗಳು ಕ್ಲಾಷ್‌ ಆಗುತ್ತವೆ ಎನ್ನಲಾಗಿತ್ತು. ಆದರೀಗ ಅಪ್ಪು ಸಿನಿಮಾಗಾಗಿ ಆರ್ ಆರ್ ಆರ್ ದಿನಾಂಕವನ್ನು ಬದಲಾಯಿಸಲಾಗಿದೆ. ಈ ಮೂಲಕ ರಾಜಮೌಳಿ ಆ್ಯಂಡ್ ಟೀಂ ಅಪ್ಪುಗೆ ನಮನ ಸಲ್ಲಿಸಿದೆ.