​ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್. ನವದೆಹಲಿ,ಫೆಬ್ರವರಿ,1,2022(..):ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಲೋಕಸಭೆಯಲ್ಲಿ ಇಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸುಮಾರು 1 ಗಂಟೆ 33 ನಿಮಿಷಗಳ ಕೇಂದ್ರ ಬಜೆಟ್ ಮಂಡಿಸಿದರು. ಈ ವೇಳೆ ಈ ವಿಚಾರವನ್ನ ಘೋಷಿಸಿದರು. ಈ ಬಜೆಟ್ ನಲ್ಲಿ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ತೆರಿಗೆಯನ್ನು ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ನೂತನ ತೆರಿಗೆ ನೀತಿಯನ್ನು ಪರಿಚಯಿಸಲಾಗುತ್ತಿದೆ. ತೆರಿಗೆ ಪಾವತಿಯಲ್ಲಿನ ತಪ್ಪು ಸರಿ ಪಡಿಸೋದಕ್ಕಾಗಿ 2 ವರ್ಷ ಕಾಲಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ಈ ನಡುವೆ ಸಹಕಾರಿ ಸಂಘಗಳ ಸರ್ಚ್ ಚಾರ್ಜ್ ಅನ್ನು ಶೇ.12 ರಿಂದ 7ಕ್ಕೆ ಇಳಿಕೆ ಮಾಡಿರೋದಾಗಿ ಘೋಷಣೆ ಮಾಡಿದರು. ಕೇಂದ್ರ-ರಾಜ್ಯ ಸರ್ಕಾರದ ನೌಕರರಿಗೆ ಏಕ ರೂಪದ ತೆರಿಗೆ. ಆದಾಯ ವಂಚನೆ ಕೋರರಿಗೆ ಶಾಕ್​- ತೆರಿಗೆ ವಂಚನೆ ಪತ್ತೆಯಾದ್ರೆ ಯಾವುದೇ ಸೌಲಭ್ಯ ಸಿಗಲ್ಲ. ವಂಚಕ ಕಂಪನಿಗಳು ಬ್ಲ್ಯಾಕ್​ ಲಿಸ್ಟ್​ಗೆ. ಸ್ಟಾರ್ಟ್​ಅಪ್​ಗಳಿಗೆ ಉತ್ತೇಜನ ನೀಡಲು ಮುಂದಿನ ವರ್ಷದವರೆಗೂ ಸ್ಟಾರ್ಟ್​ಅಪ್​ಗಳಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ತಿಳಿಸಿದರು. : - –- . …. , 1, 2022 (..): . . 1 , 33 . “ . , 2 ,” . 7% 12%. ; – ; ; 2022-23 .: / / /