ಮತ್ತೆ ಗಂಡಸುತನದ ಮಾತು ಮುನ್ನಲೆಗೆ: ಸಿದ್ಧರಾಮಯ್ಯ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ. ಮೈಸೂರು,ಜನವರಿ,31,2022(..):ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಬೇರೆ ಬೇರೆ ಕ್ಷೇತ್ರಕ್ಕೆ ಕರೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ನೀವೊಬ್ಬರೆ ಗಂಡಸು? ಯಾಕೆ ಆ ಕ್ಷೇತ್ರದಲ್ಲಿ ಯಾರು ಗಂಡಸರು ಇಲ್ಲವಾ.? ನಿಮ್ಮನ್ನು ಯಾರು ಪ್ರಮುಖ ನಾಯಕರು ಕರೆಯುತ್ತಿದ್ದಾರೆ.? ಯಾರೋ ಕೆಲವು ಚಮಚಾಗಳು ಕರೆಯುತ್ತಿದ್ದಾರೆ ಅಷ್ಟೇ. ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿನ ಭಸ್ಮಾಸುರ. ಕಾಂಗ್ರೆಸ್ ಮುಗಿಸಿಯೇ ಅವರು ಹೋಗುವುದು ಎಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯನಿಂದ ಅಹಿಂದದವರು ಮುಳುಗಿ ಹೋದರು. ಅಹಿಂದದವರನ್ನು ಉಪಯೋಗಿಸಿಕೊಂಡು ಸಿದ್ದರಾಮಯ್ಯ ದಡಕ್ಕೆ ಬಂದರು. ಸಿದ್ದರಾಮಯ್ಯ ಕುರುಬರನ್ನು ಬೆಳೆಸಲಿಲ್ಲ ಎಲ್ಲರನ್ನು ಮುಗಿಸಿದರು. ಈಗ ಕುರುಬರ ಕ್ಷೇತ್ರಗಳಿಗೆ ಬೇರೆಯವರನ್ನು ಕರೆ ತರುತ್ತಿದ್ದಾರೆ. ಸಿದ್ದರಾಮಯ್ಯ ಯಾರನ್ನು ಬೆಳೆಯಲು ಬಿಡಲಿಲ್ಲ. ಅವರಿಗಿಂತ ಬಿಳಿ ಬಟ್ಟೆ ಬೇರೆ ಯಾರು ಹಾಕುವಂತಿಲ್ಲ. ನನ್ನನ್ನು ಮುಗಸಿದಿರಿ ಹೆಚ್.ಎಂ ರೇವಣ್ಣನನ್ನು ಮುಗಿಸಿದಿರಿ. ಖರ್ಗೆ ಎಲ್ಲಿ ? ಪರಮೇಶ್ವರ್ ಎಲ್ಲಿ.? ರೋಷನ್ ಬೇಗ್ ಎಲ್ಲಿ?. ಇವರೆಲ್ಲರನ್ನೂ ಮುಗಿಸಿದ್ದು ಸಿದ್ದರಾಮಯ್ಯ ಕಾಂಗ್ರೆಸ್ ತತ್ವ ಸಿದ್ದಾಂತ ಬೇರೆ ಸಿದ್ದರಾಮಯ್ಯ ಸಿದ್ದಾಂತ ಬೇರೆ ಎಂದು ಹರಿಹಾಯ್ದರು. ಹುಲಿ ಶಿಕಾರಿಗೆ ಹುಲಿಯನ್ನೇ ಕಟ್ಟಬೇಕು ಕುರಿಯನ್ನು ಅಲ್ಲ. ಪರಿಷತ್ ಉಪನಾಯಕ ಖಾದರ್‌ಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಟೀಕಿಸಿದ ಹೆಚ್.ವಿಶ್ವನಾಥ್, ಅದರಿಂದ ಏನು ಪ್ರಯೋಜನವಿಲ್ಲ. ಉಪನಾಯಕನದ್ದು ಏನು ಕೆಲಸ ಇಲ್ಲ. ಯಾವ ಸೌಲಭ್ಯವೂ ಇಲ್ಲ. ಇಬ್ರಾಹಿಂ ಚೆನ್ನಾಗಿ ಹೇಳಿದ್ದಾರೆ. ಹುಲಿ ಶಿಕಾರಿಗೆ ಹುಲಿಯನ್ನೇ ಕಟ್ಟಬೇಕು ಕುರಿಯನ್ನು ಅಲ್ಲ. ಕಾಂಗ್ರೆಸ್‌ ನ ಹಳ್ಳ ಹಿಡಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ವಿಜಯಶಂಕರ್ ವಿಶ್ವನಾಥ್ ಕರೆದರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ. ಕುರುಬರ ಕಾರ್ಯಕ್ರಮಕ್ಕೆ ಕರೆಯದಂತೆ ತಾಕೀತು ಮಾಡಿದ್ದಾರೆ. ಇಂತಹ ಮನಸ್ಥಿತಿಯವರು ಸಿದ್ದರಾಮಯ್ಯ ಎಂದು ವಿಶ್ವನಾಥ್ ಕಿಡಿಕಾರಿದರು. ನಿಮ್ಮ ಜೊತೆ ಮಲಗಿದರೆ ಪಾವಿತ್ರ್ಯತೆ, ನಮ್ಮ ಜೊತೆ ಮಲಗಿದರೆ ಅನೈತಿಕತೆನಾ? ನನ್ನ ಸಂಪರ್ಕದಲ್ಲಿ ಬೇರೆ ಪಕ್ಷದ ಶಾಸಕರು ಸಚಿವರಿದ್ದಾರೆ ಎಂಬ ಸಿದ‍್ಧರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಎಚ್ ವಿಶ್ವನಾಥ್, ಮಿಸ್ಟರ್ ಸಿದ್ದರಾಮಯ್ಯ 15 ಜನರಿಗೆ ಎಷ್ಟು ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದೀರಾ.? ನಾವು 17 ಜನ ಹೋದಾಗ ಏನೇಲ್ಲಾ ಮಾತನಾಡಿದಿರಿ.? ರಮೇಶ್ ಕುಮಾರ್ ಕೈಲಿ ಏನೆಲ್ಲಾ ಮಾಡಿಸಿದಿರಿ. ನಿಮ್ಮ ಜೊತೆ ಮಲಗಿದರೆ ಪಾವಿತ್ರ್ಯತೆ ನಮ್ಮ ಜೊತೆ ಮಲಗಿದರೆ ಅನೈತಿಕತೆನಾ? ಎಂದು ಪ್ರಶ್ನಿಸಿದರು. ಜನರನ್ನು ದಡ್ಡರು ಅಂದುಕೊಂಡಿದ್ದೀರಾ. ಅವರಿಗೆ ಎಲ್ಲಾ ಗೊತ್ತಿದೆ ನಿಮಗೆ ಪಾಠ ಕಲಿಸುತ್ತಾರೆ. ನನ್ನನ್ನು ಸಿ ಎಂ ಇಬ್ರಾಹಿಂರನ್ನು ಸಿದ್ದರಾಮಯ್ಯ ಜೀವ ಇರುವವರೆಗೂ ನೆನಪಿಸಿಕೊಳ್ಳಬೇಕು. ಎಸ್ ಆರ್ ಪಾಟೀಲ್ ಅವರನ್ನು ಮುಗಿಸಿದ್ದು ಸಿದ್ದರಾಮಯ್ಯ. ಅವರಿಗೆ ಟಿಕೆಟ್ ಕೊಡಲಿಲ್ಲ. ಚಿಮ್ಮನಕಟ್ಟಿ ಮನೆ ಹಾಳಾಗಿದ್ದು ಸಿದ್ದರಾಮಯ್ಯರಿಂದ. ಯಾರ ಮನೆ ಹಾಳಾದರೂ ನೀವು ಚೆನ್ನಾಗಿದ್ದೀರಾ. ನಿನಗೆ ದೆಹಲಿಯಲ್ಲಿ ಯಾರು ಗೊತ್ತಿದ್ದರು.? ಖರ್ಗೆ, ಎಸ್.ಎಂ.ಕೃಷ್ಣ ಸಹಾಯ ಮಾಡಿದಕ್ಕೆ ಕಾಂಗ್ರೆಸ್ ಪಕ್ಷ ಸೇರಿದ್ದು. ಕೃತಜ್ಞತೆಯೇ ಇಲ್ಲದ ಜನ ನಾಯಕ ಸಿದ್ದರಾಮಯ್ಯ. ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೆದ್ದು ತೋರಿಸಲಿ. ಸಿಎಂ ಇಬ್ರಾಹಿಂ ಸರಿಯಾಗಿಯೇ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಈಗ ಕ್ಷೇತ್ರ ಹುಡುಕುತ್ತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ನಿಂತರೇ 49 ಸಾವಿರದಿಂದ ಸೋಲುತ್ತಾರೆ ಎಂದು ಹೆಚ್.ವಿಶ್ವನಾಥ್ ಭವಿಷ್ಯ ನುಡಿದರು. : - --. … : . , 31, 2022 (..): . . . “ . ’ , , . . ’ . ’ . , .. , ? ? ?! ,” .: . / /