ವೀಕೆಂಡ್ ಕರ್ಫ್ಯೂ ರದ್ದು ಹಿನ್ನೆಲೆ: ಶನಿವಾರವೂ ತರಗತಿ ನಡೆಸಲು ಶಿಕ್ಷಣ ಇಲಾಖೆ ಸುತ್ತೋಲೆ ಬೆಂಗಳೂರು, ಜನವರಿ 30, 2022 (..):ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದು ಹಿನ್ನೆಲೆ ಶನಿವಾರ ಕೂಡ ತರಗತಿ ನಡೆಸಲು ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ . ಬೆಂಗಳೂರು ಸೇರಿದಂತೆ ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ ಸೂಚನೆ ಕೊಟ್ಟಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶನಿವಾರ ಶಾಲೆ ಬಂದ್ ಮಾಡಲಾಗಿತ್ತು. ಆದರೆ, ಈಗ ಹೊಸ ಕೊರೊನಾ ಮಾರ್ಗಸೂಚಿಯಂತೆ ರಾಜ್ಯಾದ್ಯಂತ ಶನಿವಾರದಂದು ತರಗತಿ ನಡೆಸುವಂತೆ ಸುತ್ತೋಲೆ ಹೊರಡಿಸಿದೆ. ಜನವರಿ 31ರಿಂದ ನೈಟ್ ಕರ್ಪ್ಯೂ ರದ್ದು ಪಡಿಸಲಾಗಿದೆ. ಜೊತೆಗೆ ಕೋವಿಡ್ ಕಡಿಮೆಯಾದ ಕಾರಣ ಬೆಂಗಳೂರಿನಲ್ಲಿ ಶಾಲೆಗಳ ಪುನರಾರಂಭಕ್ಕೂ ಅನುಮತಿಸಲಾಗಿದೆ.