ನಾಳೆಯಿಂದ ಸಂಸತ್ ಅಧಿವೇಶನ, ನಾಡಿದ್ದು ಬಜೆಟ್ (ಫೆ.1) ಮಂಡನೆ ಬೆಂಗಳೂರು, ಜನವರಿ 30, 2022 (..):ಸಂಸತ್ ಬಜೆಟ್ ಅಧಿವೇಶನ ನಾಳೆಯಿಂದ (ಜನವರಿ 31 ರಂದು) ಆರಂಭವಾಗಲಿದೆ. ಮೊದಲ ದಿನದ ಕಲಾಪದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಂದೇ ಆರ್ಥಿಕ ಸಮೀಕ್ಷೆ ಕೂಡ ಮಂಡನೆಯಾಗಲಿದೆ. ಮರು ದಿನ ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.