ವೇತನ ದ್ವಿಗುಣ: ರಾಕೇಶ್ ಸಿಂಗ್ ರನ್ನು ಅಭಿನಂದಿಸಿದ ಗ್ರಂಥಾಲಯ ಸಹಾಯಕರು. ಬೆಂಗಳೂರು,ಜನವರಿ,29,2022(..):ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೇಂದ್ರ ಗ್ರಂಥಾಲಯ ಸಹಾಯಕರ ಬಹುದಿನಗಳ ವೇತನ ಸಮಸ್ಯೆಗೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಪರಿಹಾರ ಸೂಚಿಸಿದ್ದು ಕಳೆದ ಸಭೆಯಲ್ಲಿ ನೀಡಿದ್ದ ಭರವಸೆಯಂತೆ ಗ್ರಂಥಾಲಯ ಸಹಾಯಕರ ವೇತನವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಗ್ರಂಥಾಲಯ ಸಹಾಯಕರು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರನ್ನ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. : - ---