ಭೂತದ ಬಾಯಲ್ಲಿ ಭಗವದ್ಗೀತೆ – ಡಿಕೆಶಿಗೆ ಮಾಜಿ ಸಚಿವ ಸಿ.ಟಿ ರವಿ ಟಾಂಗ್. ಗೋವಾ,ಜನವರಿ,29,2022(..): ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವಿತ್ತು ಎಂದು ಹೇಳಿಕೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ. ಗೋವಾದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಡಿಕೆ ಶಿವಕುಮಾರ್ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ. ಡಿಕೆಶಿ ಭ್ರಷ್ಟಾಚಾರ ಕೇಸ್ ನಲ್ಲಿ ಜೈಲಿಗೆ ಹೋಗಿ ಬೇಲ್ ನಲ್ಲಿದ್ದಾರೆ. ಭೂತದ ಬಾಯಲ್ಲಿ ಬರೋ ಭಗವದ್ಗೀತೆಗೂ ಡಿಕೆಶಿ ಬಾಯಲ್ಲಿ ಬರುವ ಭ್ರಷ್ಟಾಚಾರ ಬಗ್ಗೆ ಮಾತಿಗೂ ವ್ಯತ್ಯಾಸವಿಲ್ಲ. ಕಾಂಗ್ರೆಸ್ ನಿಂದ ಗೋವಾ ಜನತೆ ಪಾಠ ಕೇಳುವ ಪರಿಸ್ಥಿತಿ ಇಲ್ಲ ಎಂದು ಸಿಟಿ ರವಿ ತಿರುಗೇಟು ನೀಡಿದರು. : - -