ಮೊಮ್ಮಗಳ ಸಾವಿನ ನೋವಿನಲ್ಲಿರುವ ಮಾಜಿ ಸಿಎಂ ಬಿಎಸ್ ವೈಗೆ ಸಾಂತ್ವನ ಹೇಳಿದ ಪ್ರಧಾನಿ ಮೋದಿ ಮತ್ತು ರಾಜಕೀಯ ಗಣ್ಯರು. ಬೆಂಗಳೂರು,ಜನವರಿ,28,2022(..):ಮೊಮ್ಮಗಳು ಸೌಂದರ್ಯ ಅವರ ಸಾವಿನ ನೋವಿನಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸೇರಿ ರಾಜಕೀಯ ನಾಯಕರು ಸಾಂತ್ವನ ಹೇಳಿದ್ದಾರೆ. ಯಡಿಯೂರಪ್ಪ ಅವರ ಮೊದಲ ಮಗಳು ಪದ್ಮಾವತಿ ಅವರ ಮಗಳು ಸೌಂದರ್ಯ ಅವರ ಸಾವು ಮಾಜಿ ಸಿಎಂ ಕುಟುಂಬಕ್ಕೆ ತುಂಬಲಾರದ ನೋವು ಮೂಡಿಸಿದೆ. ಮಾಜಿ ಸಿಎಂ ಬಿಎಸ್ ವೈಗೆ ಕರೆ ಮಾಡಿರುವ ಪ್ರಧಾನಿ ಮೋದಿ, ಧೈರ್ಯ ತುಂಬುವ ಮಾತುಗಳ ಮೂಲಕ ಸಂತ್ವನ ತಿಳಿಸಿ, ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಎಸ್ ವೈ ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಇನ್ನು ಮಾಜಿ ಸಿಎಂ ಕುಟುಂಬದ ದುಃಖದಲ್ಲಿ ಅನೇಕ ಬಿಜೆಪಿ ನಾಯಕರು ಭಾಗಿಯಾಗಿದ್ದು, ಧೈರ್ಯ ತುಂಬಿದರು. ಸೌಂದರ್ಯ ಅಂತ್ಯ ಸಂಸ್ಕಾರ ಅಬ್ಬಲಗೆರೆಯ ನೀರಜ್​ ಫಾರ್ಮ್​​ ಹೌಸ್​ನಲ್ಲಿ ನೇರವೇರಲಿದೆ. : - – - -