ಸರ್ಕಾರದ 6 ತಿಂಗಳ ಸಾಧನೆ ಪುಸ್ತಕ ಬಿಡುಗಡೆಗೊಳಿಸಿದ ಸಿಎಂ ಬೊಮ್ಮಾಯಿ ಬೆಂಗಳೂರು,ಜನವರಿ,28,2022(..):ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು 6 ತಿಂಗಳ ಸಂಭ್ರಮವಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ 6 ತಿಂಗಳ ಸಾಧನೆ ಪುಸ್ತಕ ಬಿಡುಗಡೆಗೊಳಿಸಿದರು. ವಿಧಾನಸೌಧದಲ್ಲಿ ಜನಕಲ್ಯಾಣ ಸಮಾರಂಭಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ 6 ತಿಂಗಳ ಸಾಧನೆ ಪುಸ್ತಕ ಭವ್ಯಭವಿಷ್ಯದ ಭರವಸೆಯ ಹೆಜ್ಜೆಗಳು ಎಂಬ ಪುಸ್ತಕ ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ ಭೈರತಿ ಬಸವರಾಜ್, ಉಮೇಶ್ ಕತ್ತಿ, ಡಾ.ಕೆ. ಸುಧಾಕರ್ ಗೋಪಾಲಯ್ಯ,ಕೆಎಸ್ ಈಶ್ವರಪ್ಪ ಎಂಟಿಬಿ ನಾಗರಾಜ್ ಎಸ್. ಟಿ ಸೋಮಶೇಖರ್, ಬಿಸಿ ನಾಗೇಶ್ ಸಂಸದ ಪಿಸಿ ಮೋಹನ್ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು. : - -