ತಿರುಪತಿ ಇನ್ನು ಮುಂದೆ ಶ್ರೀ ಬಾಲಾಜಿ ಜಿಲ್ಲೆ ಬೆಂಗಳೂರು, ಜನವರಿ 28, 2021 (..):ತಿರುಪತಿ ಜಿಲ್ಲೆಗೆ ಮರುನಾಮಕರಣ ಮಾಡಲು ಆಂಧ್ರ ಪ್ರದೇಶ ತೀರ್ಮಾನಿಸಿದೆ. ಹೌದು. ತಿರುಪತಿ ಇನ್ನು ಜಿಲ್ಲಾ ಕೇಂದ್ರವಾಗಲಿದೆ. ಇದಕ್ಕೆ ಶ್ರೀ ಬಾಲಾಜಿ ಜಿಲ್ಲೆ ಎಂದು ಹೆಸರಿಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಮಾಡುವುದಕ್ಕೆ ಜನರಲ್ಲಿ ಖುಷಿ ಮನೆ ಮಾಡಿದೆ. ಈ ನಡುಯವೆ ಬಾಲಾಜಿ ಜಿಲ್ಲೆ ಎಂದು ನಾಮಕರಣ ಮಾಡುವುದಕ್ಕೆ ಕೆಲವರು ಅತೃಪ್ತಿ ಸೂಚಿಸಿದ್ದಾರೆ. ಆದರೆ ಸರಕಾರ ಈ ಕುರಿತು ಅಂತಿಮ ತೀರ್ಮಾನ ಕೈಗೊಂಡಿರುವುದರಿಂದ ತಿರುಪತಿ ಇನ್ನು ಮುಂದೆ ಬಾಲಾಜಿ ಜಿಲ್ಲೆಯಾಗಲಿದೆ.