ಲಕ್ಷ್ಮಣ್ ಸವದಿ ಅವರು ಡಿ.ಕೆಶಿ ಸಂಪರ್ಕದಲ್ಲಿದ್ದಾರೆ- ಎಂಎಲ್ ಸಿ ಲಖನ್ ಜಾರಕಿಹೊಳಿ. ಬೆಳಗಾವಿ,ಜನವರಿ,27,2022(..):ಜೆಡಿಎಸ್ ಮತ್ತು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಎಂಎಲ್​ಸಿ ಲಖನ್ ಜಾರಕಿಹೊಳಿ ಹೊಸಬಾಂಬ್ ಸಿಡಿಸಿದ್ದಾರೆ. ಹೌದು, ಲಕ್ಷ್ಮಣ ಸವದಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ಡಿಕೆ ಶಿವಕುಮಾರ್ , ಸವದಿ ಮಾತನಾಡಿರುವ ಮೊಬೈಲ್ ನಂಬರ್ ಇದೆ ಎಂದು ಲಖನ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಲಖನ್ ಜಾರಕಿಹೊಳಿ, ಸವದಿ, ಡಿಕೆಶಿ ಮಾತನಾಡಿದ ನಂಬರ್ ನಮ್ಮ ಬಳಿ ಇದೆ. ಲಕ್ಷ್ಮಣ್ ಸವದಿ ಬೇರೆ ನಂಬರ್ ​ನಿಂದ ಡಿಕೆಶಿ ಜೊತೆ ಮಾತುಕತೆ ನಡೆಸಿದ್ದಾರೆ. ಸೋತ ನಾಯಕರೇ ಡಿಕೆಶಿ ಜತೆ ಸಂಪರ್ಕದಲ್ಲಿರುವವರು ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿ ವರಿಷ್ಠರು ರಮೇಶ್, ಬಾಲಚಂದ್ರರನ್ನ ಬಳಸಿಕೊಳ್ಳಬೇಕು. ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ಕೊಟ್ಟರೆ ಇನ್ನೂ 25 ಸ್ಥಾನ ಹೆಚ್ಚು ಗೆಲ್ಲುತ್ತಾರೆ. 25ಕ್ಕೂ ಹೆಚ್ಚು ಶಾಸಕರು ರಮೇಶ್ ಸಂಪರ್ಕದಲ್ಲಿ ಇದ್ದಾರೆ ಎಂದು ಲಖನ್ ಜಾರಕಿಹೊಳಿ ತಿಳಿಸಿದ್ದಾರೆ. : – - .