ಕಾಂಗ್ರೆಸ್ ತೊರೆಯಲು ನಿರ್ಧರಿಸಿದ ಸಿಎಂ ಇಬ್ರಾಹಿಂಗೆ ಟಾಂಗ್ ನೀಡಿದ ಪ್ರಿಯಾಂಕ್ ಖರ್ಗೆ. ಬೆಂಗಳೂರು,ಜನವರಿ,27,2022(..):ಪರಿಷತ್ ವಿಪಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೆ ಕಾಂಗ್ರೆಸ್ ಗೆ ಗುಡ್ ಬೈ ಹೇಳಲು ಮುಂದಾಗಿರುವ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಪಕ್ಷ ಬಿಡುವವರಿಗೆ ಬೂಸ್ಟರ್ ಡೋಸ್ ಬೇಕಾಗಿದೆ. ಬಿಜೆಪಿ ಎಂಬ ವೈರಸ್ ಗೆ ಕಾಂಗ್ರೆಸ್ ಲಸಿಕೆ ಬೇಕು. ಕಾಂಗ್ರೆಸ್ ಲಸಿಕೆ ದೇಶದ ಸಮಸ್ಯೆಗೆ ಪರಿಹಾರ. ಬಡತನಕ್ಕೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು. ರೈತರಿಗೂ ಕಾಂಗ್ರೆಸ್ ವ್ಯಾಕ್ಸಿನ್ ಬೇಕು. ಪಕ್ಷ ಬಿಟ್ಟು ಯಾರಾದ್ರೂ ಹೋಗಲಿ ಪಕ್ಷ ಏನು ಕುಸಿದು ಹೋಗುತ್ತಾ..? ಎಂದು ನುಡಿದರು. ಕಾಂಗ್ರೆಸ್ ಗೂ ನನಗೂ ಮುಗಿದ ಅಧ್ಯಾಯ. ಶೀಘ್ರದಲ್ಲೇ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿಎಂ ಇಬ್ರಾಹಿಂ ಹೇಳಿದ್ದು ಅಲ್ಲದೇ ಹೆಚ್.ಡಿ ದೇವೇಗೌಡರು ಹಾಗೂ ಹೆಚ್.ಡಿ ಕುಮಾರಸ್ವಾಮಿ ತಮಗೆ ಕರೆ ಮಾಡಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ತೊರೆಯುವ ಸಿಎಂ ಇಬ್ರಾಹಿಂ ಜೆಡಿಎಸ್ ಸೇರುತ್ತಾರಾ ಕಾದು ನೋಡಬೇಕಿದೆ. : – –