ಹೈಕಮಾಂಡ್ ತೀರ್ಮಾನಿಸಿದರೇ ಸಚಿವ ಸ್ಥಾನ ಸಿಗುತ್ತೆ- ಶಾಸಕ ಪಿ.ರಾಜೀವ್ ಕುಡುಚಿ,ಜನವರಿ.25,2022(..): ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗುತ್ತಿದ್ದು ಹಲವು ಶಾಸಕರು ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಸಭೆ ಮೇಲೆ ಸಭೆ ನಡೆಸಿ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಂಪುಟ ವಿಸ್ತರಣೆ ಕುರಿತು ಕುಡುಚಿಯಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಪಿ. ರಾಜೀವ್, ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ. ಹೈಕಮಾಂಡ್ ತೀರ್ಮಾನಿಸಿದರೇ ಸಚಿವ ಸ್ಥಾನ ಸಿಗುತ್ತೆ. ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದರೇ ಸಚಿವ ಸ್ಥಾನ ಸಿಗಲ್ಲ ಎಂದು ತಿಳಿಸಿದ್ದಾರೆ. : -- -.