ಮೈಸೂರು ವಿವಿ : ವಿದ್ಯಾರ್ಥಿಗಳ ಪ್ರವೇಶಾತಿ ಮಾಹಿತಿಗೆ ವರದಾನವಾಯ್ತು ‘ಎಲ್‌ಇಡಿ ಸ್ಕ್ರೀನ್’ ಮೈಸೂರು, ಜ24, 2022 : (.. ) ಮೈಸೂರು ವಿಶ್ವವಿದ್ಯಾಲಯದಲ್ಲಿ ಇದೀಗ ಪ್ರವೇಶಾತಿ ಸಮಯ. ಕೊರೊನಾ ಇರುವುದರಿಂದ ವಿದ್ಯಾರ್ಥಿಗಳು, ಪೋಷಕರು ಮಾಹಿತಿಗೆ ಗುಂಪುಗೂಡುವಂತಿಲ್ಲ. ಇದನ್ನು ಮನಗಂಡು ಎರಡು ವರ್ಷದ ಹಿಂದೆಯೇ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಶುರು ಮಾಡಿದ್ದ ‘ಎಲ್‌ಇಡಿ ಸ್ಕ್ರೀನ್’ ವ್ಯವಸ್ಥೆ ಇದೀಗ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನ ಉಂಟು ಮಾಡಿದೆ. ಕೊರೊನಾ ಹಿನ್ನೆಲೆಯಲ್ಲಿ ಇದೀಗ ಎಲ್ಲೆಡೆ ಆನ್ಲೈನ್ ಹಾಗೂ ಆಫ್ಲೈನ್ ಪ್ರವೇಶಾತಿ ನಡೆಯುತ್ತಿದೆ. ದೂರದೂರಿನಿಂದ ವಿದ್ಯಾರ್ಥಿಗಳು ಬಂದಿರುತ್ತಾರೆ. ಅವರಿಗೆ ಪ್ರವೇಶಾತಿ ಸಮಯದಲ್ಲಿ ಸೂಕ್ತ ಮಾಹಿತಿ ಬೇಕಾಗಿರುತ್ತದೆ. ಯಾವ ಬ್ಯಾಂಕಿಗೆ ಹೋಗಿ ಶುಲ್ಕ ಕಟ್ಟಬೇಕು? ವೆಬ್ಸೈಟ್ ಯಾವುದು? ಎಂಬಿತ್ಯಾದಿ ಪ್ರಶ್ನೆಗಳು ಸಹಜ. ಈ ಹಿಂದೆ ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗುತ್ತಿದ್ದರೂ ವಿಸ್ಕೃತವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಸಿಗುತ್ತಿರಲಿಲ್ಲ. ಈ ಹಿನ್ನೆಲೆ ವಿವಿಯ ಕಾರ್ಯ ಚಟುವಟಿಕೆಯ ಜತೆಗೆ ವಿದ್ಯಾರ್ಥಿಗಳಿಗೆ ಬೇಕಾದ ಸಮಗ್ರ ಮಾಹಿತಿಯನ್ನು ಕ್ಯಾಂಪಸ್‌ನ ಐದು ಕಡೆ ಎಲ್ಇಡಿ ಸ್ಕ್ರೀನ್ ಮೂಲಕ ವಿಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮೈಸೂರು ವಿವಿ ಶುರು ಮಾಡಿದ ಮೇಲೆ ಕರ್ನಾಟಕ ರಾಜ್ಯ ಮುಕ್ತ ವಿವಿ ಹಾಗೂ ರಿಜಿನಲ್ ಕಾಲೇಜಿನಲ್ಲೂ ಈ ಕಾನ್ಸೆಪ್ಟ್ ಆರಂಭವಾಗಿದೆ. ಐದು ಕಡೆ ಅಳವಡಿಕೆ: ಮೈಸೂರು ವಿಶ್ವವಿದ್ಯಾಲಯದಲ್ಲಿ 2020ರಲ್ಲೇ ಐದು ಕಡೆ ‘ಎಲ್‌ಇಡಿ ಸ್ಕ್ರೀನ್’ ಅಳವಡಿಸಲಾಯಿತು. ಕ್ರಾಫರ್ಡ್ ಹಾಲ್ ಮುಂಭಾಗ, ವಿವಿ ಪ್ರವೇಶದ್ವಾರದ ಬಳಿಯ ಕುವೆಂಪು ಪ್ರತಿಮೆ ಎದುರು, ಗ್ರಂಥಾಲಯ ಬಳಿ, ಸೆನೆಟ್ ಭವನ ಹಾಗೂ ಜೇಸಿ ಕಾಲೇಜಿನ ಎಂಟ್ರಿ ಜಾಗದಲ್ಲಿ ಒಂದೊಂದು ಎಲ್ಇಡಿ ಸ್ಕ್ರೀನ್ ಹಾಕಲಾಗಿದೆ. ವಿಶ್ವವಿದ್ಯಾಲಯದ ನಾನಾ ವಿಭಾಗಗಳಲ್ಲಿ ಏರ್ಪಡಿಸುವ ಕಾರ್ಯಕ್ರಮಗಳು, ವಿವಿ ಯೋಜನೆಗಳು, ಪ್ರವೇಶಾತಿ, ಪರೀಕ್ಷೆ, ನೋಟಿಫಿಕೇಶನ್ ಸೇರಿದಂತೆ ನಾನಾ ಮಾಹಿತಿಗಳನ್ನು ಎಲ್‌ಇಡಿ ಸ್ಕ್ರೀನ್ ಮೂಕ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಿಸಲಾಗುತ್ತಿದೆ. ‘‘ಹೊರಗಿನಿಂದ ಬಂದ ಪಾಲಕರು ಹಾಗೂ ವಿದ್ಯಾರ್ಥಿಗಳು ವಿವಿಗೆ ಸಂಬಂಧಪಟ್ಟ ಮಾಹಿತಿಯನ್ನು ಎಲ್ಇಡಿ ಸ್ಕ್ರೀನ್ ಮೂಲಕ ತಿಳಿದುಕೊಳ್ಳಬಹುದು. ತಾಂತ್ರಿಕ ನುರಿತರು ಹಾಗೂ ಅಧ್ಯಾಪಕರು ಇದರಲ್ಲಿ ಕೆಲಸ ಮಾಡಲಿದ್ದಾರೆ. ಅವರು ಪ್ರತಿ ಎರಡು-ಮೂರು ಗಂಟೆಗೆ ಏನು ಪ್ರಸಾರವಾಗಬೇಕೆಂಬುದನ್ನು ನಿರ್ಧರಿಸುತ್ತಾರೆ. ಹಳ್ಳಿಗಳಿಂದ ಬರುವ ಸಾಕಷ್ಟು ಜನರಿಗೆ ಇದು ಅನುಕೂಲ ಒದಗಿಸಿದೆ. ಕೊರೊನಾ ಸಮಯ ಬೇರೆ ಆಗಿರುವುದರಿಂದ ಪ್ರವೇಶಾತಿಗೆ ಸಂಬಂಧಪಟ್ಟ ಸಮಗ್ರ ಮಾಹಿತಿ ಲಭ್ಯವಾಗುತ್ತಿದೆ,’’ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಎಲ್ಇಡಿ ಸ್ಕ್ರೀನ್ ಪ್ರಯೋಜನವೇನು?: ವಿವಿಯಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆ ಪ್ರತಿಯೊಬ್ಬ ವಿದ್ಯಾರ್ಥಿಗೂ ತಿಳಿಯಬೇಕೆಂಬ ಉದ್ದೇಶದಿಂದ ಈ ಎಲ್ಇಡಿ ಸ್ಕ್ರೀನ್ ಹಾಕಲಾಗಿದೆ. ವಿವಿಯಲ್ಲಿ ನಾನಾ ವಿಭಾಗಗಳಿದ್ದು, ಪ್ರತಿಯೊಂದು ವಿಭಾಗದಲ್ಲಿ ಏನಾದರೂ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ, ಇತರೆ ವಿಭಾಗದ ವಿದ್ಯಾರ್ಥಿಗಳಿಗೆ ಏನಾಗುತ್ತಿದೆ ಎಂಬ ಮಾಹಿತಿಯೇ ಇರುವುದಿಲ್ಲ. ಹಾಗಾಗಿ ಆಯಾ ವಿಭಾಗದಲ್ಲಿ ನಡೆಯುವ ವಿಚಾರ ಸಂಕಿರಣ, ಸಂವಾದ, ಕಾರ್ಯಕ್ರಮಗಳನ್ನು ಎಲ್ಇಡಿ ಸ್ಕ್ರೀನ್ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಯುವಂತೆ ನೇರ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ, ಕ್ಯಾಂಪಸ್ ಒಳಗೆ ಆಗುವ ಕ್ರಿಡಾಕೂಟ, ಆಚರಣೆ ಮುಂತಾದ ಮಾಹಿತಿಯೂ ಬಿತ್ತರವಾಗಲಿದೆ. ಕ್ಲಾಕ್ ಟವರ್, ವಿಜ್ಞಾನ ಭವನ, ಜೆಸಿ ಎಂಟ್ರಿ ಜಾಗದಲ್ಲಿ ಹಾಕಿರುವುದರಿಂದ ವಿದ್ಯಾರ್ಥಿಗಳು ಸಂಚಾರ ಮಾಡುತ್ತಲೇ ಮಾಹಿತಿಯನ್ನು ನೋಡಬಹುದು. : ---- … : – , 24, 2022 (..): . -19 . . . , , . . . ? ? . , . . () ’ . 2020. , , , . , , , , , . . . . . , , . . , , .: / . . / /