ಮುಂದುವರಿದ ಮಾಜಿ ಸಿಎಂಗಳ ಮಾತಿನ ಕಾಳಗ: ಸಿದ್ದು ವಿರುದ್ಧ ಎಚ್ಡಿಕೆ ಮತ್ತೆ ವಾಗ್ದಾಳಿ ಬೆಂಗಳೂರು, ಜನವರಿ 23, 2022 (..):ಮಾಜಿ ಸಿಎಂಗಳ ಮಾತಿನ ಕಾಳಗ ಇಂದು ಕೂಡ ಮುಂದುವರಿದಿದೆ. ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ಮುಂದುವರಿಸಿದ್ದಾರೆ. ಮಾತನಾಡಿದ ಮೇಲೆ ದಕ್ಕಿಸಿಕೊಳ್ಳುವ ಯೋಗ್ಯತೆ ಬೇಕು. ಲಂಗು ಲಗಾಮು ಇಲ್ಲದ ನಾಲಿಗೆ ಜಾರುವ ಅಂಥವರಿಂದ ಸಂಸ್ಕೃತಿ ಕಲಿಯಬೇಕಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಎಚ್ಡಿಕೆ ಮತ್ತೆ ಗುಡುಗಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸ್ವಯಂ ಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ ನಮ್ಮ ಪಕ್ಷ ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. :