ಡಿಕೆಶಿ ಕೊರೋನಾ ಅಂಕಿ ಅಂಶ ಸುಳ್ಳು ಅಂತಾರೆ: ದಾಖಲೆ ಇದ್ದರೆ ಕೊಡಲಿ- ಗೃಹ ಸಚಿವ ಅರಗ ಜ್ಞಾನೇಂದ್ರ. ಶಿವಮೊಗ್ಗ,ಜನವರಿ,22,2022(..):ಡಿ.ಕೆ ಶಿವಕುಮಾರ್ ಕೊರೋನಾ ಅಂಕಿ ಅಂಶ ಸುಳ್ಳು ಅಂತಾರೆ ದಾಖಲೆ ಇದ್ದರೇ ತೋರಿಸಲಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸವಾಲು ಹಾಕಿದರು. ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾಂಗ್ರೆಸ್ ಪಾದಯಾತ್ರೆಗೆ ತೆರಳಿದ್ದ ಶೇ.60ರಷ್ಟು ಪೊಲೀಸರು ಕುಟುಂಬಸ್ಥರಿಗೆ ಕೊರೋನಾ ತಗುಲಿದೆ. ಪಾದಯಾತ್ರೆಯಿಂದ ಕೋಲಾರ ಹಾಸನ ತುಮಕೂರು ಮಂಡ್ಯ ರಾಮನಗರ ಜಿಲ್ಲೆಯಲ್ಲಿ ಕೊರೋನ ಹೆಚ್ಚಳವಾಗಿದೆ. ಆದರೆ ಡಿ ಕೆ ಶಿವಕುಮಾರ್ ಕೊರೋನಾ ಅಂಕಿ ಅಂಶ ಸುಳ್ಳು ಎಂದು ಹೇಳುತ್ತಿದ್ದಾರೆ. ಡಿಕೆಶಿ ಬಳಿ ಯಾವುದೇ ದಾಖಲೆ ಇದ್ದರೇ ನೀಡಿಲಿ ಎಂದು ತಿಳಿಸಿದರು. : - ---