‘ಫರ್ಜಿ’ ವೆಬ್ ಸೀರೀಸ್‌ನಿಂದ ಪ್ರೇರಿತ : ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಕರ್ನಾಟಕ ಗ್ಯಾಂಗ್ ಅಂದರ್..! . , - , ‘’, . , - . ಬೆಂಗಳೂರು, ಜು.04,2024: (..) ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಕರ್ನಾಟಕ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಸಕ್ರಿಯವಾಗಿದ್ದ ಈ ಗ್ಯಾಂಗ್ ಹಿಂದಿ ವೆಬ್ ಸೀರೀಸ್ ‘ಫರ್ಝಿ’ಯಿಂದ ಸ್ಫೂರ್ತಿ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ಯಾಂಗ್ ಸದಸ್ಯರಿಂದ ಅಪಾರ ಪ್ರಮಾಣದ ನಕಲಿ ಕರೆನ್ಸಿ, ಕರೆನ್ಸಿ-ಪ್ರಿಂಟಿಂಗ್ ಪೇಪರ್ ಮತ್ತು ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗ್ಯಾಂಗ್ 5 ಲಕ್ಷ ನಕಲಿ ನೋಟುಗಳನ್ನು 1 ಲಕ್ಷ ರೂಪಾಯಿಗೆ ಅಸಲಿ ನೋಟುಗಳಲ್ಲಿ ಮಾರಾಟ ಮಾಡಿದೆ ಎಂದು ವರದಿಯಾಗಿದೆ. ಆರೋಪಿಗಳು ಗೋಕಾಕದಿಂದ ಬೆಳಗಾವಿಗೆ ತೆರಳುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಇವರಿಂದ 100 ರೂಪಾಯಿಯ 300 ನಕಲಿ ನೋಟುಗಳು ಮತ್ತು 500 ರೂಪಾಯಿಯ 6,792 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಅನ್ವರ್ ಯಾದವಾಡ, ಸದ್ದಾಂ ಯಡಳ್ಳಿ, ರವಿ ಹಯಾಗಡಿ, ದುಂಡಪ್ಪ ಒಣಶೆಣವಿ, ವಿಟ್ಟಲ್ ಹೊಸತೋಟಲ, ಮತ್ತು ಮಲ್ಲಪ್ಪ ಕುಂಡಲಿ ಎಂದು ಗುರುತಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿಯಲ್ಲಿ ಈ ತಂಡ ಖೋಟಾ ನೋಟುಗಳನ್ನು ಮುದ್ರಿಸಿತ್ತು. ಈ ತಂಡವು ಬಾಗಲಕೋಟೆ, ಮಹಾಲಿಂಗಪುರ, ಗೋಕಾಕ, ಮೂಡಲಗಿಯಲ್ಲಿ ಈ ನೋಟುಗಳನ್ನು ಚಲಾವಣೆ ಮಾಡಿದೆ. ಬಂಧಿತರಿಂದ 5,23,900 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫರ್ಝಿ ಹಿಂದಿ ಭಾಷೆಯ ಥ್ರಿಲ್ಲರ್ ಟಿವಿ ಸರಣಿಯಾಗಿದ್ದು, ಇದು ನಕಲಿ ಜಗತ್ತಿನಲ್ಲಿ ಸಿಲುಕಿದ ಕಲಾವಿದನ ಜೀವನದ ಬಗ್ಗೆ ತಿಳಿಸುತ್ತದೆ. ವೆಬ್ ಸೀರೀಸ್‌ನಲ್ಲಿ ಶಾಹಿದ್ ಕಪೂರ್, ವಿಜಯ್ ಸೇತುಪತಿ ಮತ್ತು ಕೇ ಕೇ ಮೆನನ್ ಪ್ರಮುಖ ಪಾತ್ರದಲ್ಲಿದ್ದಾರೆ. : : , , , ‘’,