ಎಲ್ಲವನ್ನೂ ಸಿಬಿಐಗೆ ಕೊಟ್ರೆ ನಾವಿರೋದು ಯಾಕೆ ? ಬಿಜೆಪಿ ವಿರುದ್ದ ಪರಮೇಶ್ವರ್ ಕಿಡಿ ಬೆಂಗಳೂರು,ಜುಲೈ,4,2024 (..):ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಹಗರಣ ಮತ್ತು ಮುಡಾದಲ್ಲಿ ಭ್ರಷ್ಟಾಚಾರ ಕುರಿತು ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿರುವ ಬಿಜೆಪಿ ನಾಯಕರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಲ್ಲವನ್ನು ಸಿಬಿಐ ತನಿಖೆ ಕೊಟ್ಟರೇ ನಾವಿರೋದು ಯಾಕೆ? ಬಿಜೆಪಿ ಕೇಳುತ್ತಾರೆಂದು ಎಲ್ಲಾ ಪ್ರಕರಣಗಳನ್ನ ಸಿಬಿಐಗೆ ಕೊಡೋಕೆ ಆಗಲ್ಲ. ಇಲ್ಲೇ ಅಕ್ರಮ ಆಗಿದೆಯಾ ಅಂತಾ ತನಿಖೆ ಮಾಡ್ತಾರೆ. ಬಿಜೆಪಿಗೆ ನಾವು ಉತ್ತರ ಕೊಡುತ್ತೇವೆ. ಹಿಂಜರಿಯುವುದಿಲ್ಲ ಎಂದರು. ಸಿಎಂ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸಿಎಂ ರಾಜೀನಾಮೆ ನೀಡಲ್ಲ. ಸದನದಲ್ಲಿ ಯಾವ ವಿಷಯ ಚರ್ಚೆಗೆ ತೆಗೆದುಕೊಳ್ಳುತ್ತಾರೋ ಬಿಜೆಪಿಯವರಿಗೆ ನಾವು ಉತ್ತರ ಕೊಡುತ್ತೇವೆ ಎಂದರು. : , , , ,