ಮೈಸೂರು: ಸೋಮವಾರದಿಂದ ಶಾಲೆ ಆರಂಭ. ಮೈಸೂರು,ಜನವರಿ,22,2022(..): ಸೋಮವಾರದಿಂದ ಮೈಸೂರಿನಲ್ಲಿ ಶಾಲೆಗಳನ್ನ ಎಂದಿನಂತೆ ಆರಂಭಿಸಲು ಆದೇಶ ಹೊರಡಿಸಲಾಗಿದೆ. ದಿನಾಂಕ 24 ರಿಂದ ಮೈಸೂರಿನಲ್ಲಿ ಶಾಲೆಗಳು ಪುನರಾರಂಭವಾಗಲಿದ್ದು, ಈ ಕುರಿತು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು, ವಸತಿ ಶಾಲೆಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳೆಲ್ಲವೂ ಓಪನ್ ಆಗಲಿವೆ. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನ ಪಾಲಿಸಿ, ಭೌತಿಕ ತರಗತಿ ನಡೆಸಲು ಸೂಚನೆ ನೀಡಲಾಗಿದೆ. :- -- .