ಅಧಿಕಾರ, ಸ್ವಾರ್ಥಕ್ಕಾಗಿ ಸಚಿವರಾಗಿರುವವರನ್ನ ಕೈಬಿಡಿ- ಯತ್ನಾಳ್ ಭೇಟಿ ಬಳಿಕ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹ ಬೆಂಗಳೂರು,ಜನವರಿ,20,2022(..):ಅಧಿಕಾರ, ಸ್ವಾರ್ಥಕ್ಕಾಗಿ ಸಚಿವರಾಗಿರುವವರನ್ನ ಕೈಬಿಡಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಇಂದು ಶಾಸಕ ಎಂ.ಪಿ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂಪಿ ರೇಣುಕಾಚಾರ್ಯ, ಸ್ವಾರ್ಥಕ್ಕಾಗಿ ಸಚಿವರಾಗಿರುವವರನ್ನ ಕೈಬಿಡಬೇಕು. ಈ ಬಗ್ಗೆ ವರಿಷ್ಠರ ಜತೆ ಚರ್ಚಿಸುತ್ತೇವೆ ಸಚಿವ ಸ್ಥಾನದ ಬಗ್ಗೆ ಸಂಪುಟದ ಬಗ್ಗೆ ಎಲ್ಲರೂ ಮಾತನಾಡಲು ಸಾಧ್ಯವಿಲ್ಲ. ಎಲ್ಲರೂ ನೋವಿನಲ್ಲಿದ್ದಾರೆ. ಶಾಸಕರ ಭಾವನೆಗಳ ಬಗ್ಗೆ ನಾವು ಹೇಳುತ್ತೇವೆ ಸಾಧ್ಯವಾದರೆ ದೆಹಲಿಗೆ ಹೋಗಿ ವರಿಷ್ಠರನ್ನ ಭೇಟಿಯಾಗುತ್ತೇವೆ ಎಂದರು. ನನಗೆ ಯಾವ ಸಚಿವರ ವಿರುದ್ಧವೂ ಆಕ್ರೋಶವಿಲ್ಲ ಅಧಿಕಾರ ಸ್ವಾರ್ಥಕ್ಕಾಗಿ ಇರುವವರನ್ನ ಕೈಬಿಡಬೇಕು. ಉತ್ತಮ ಕೆಲಸ ಮಾಡಿದವರನ್ನ ಮುಂದುವರೆಸಿದರೇ ಒಳಿತು ಎಂದರು. ಹಾಗೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯರು. ಅವರು ಮಂತ್ರಿಯಾಗಲಿ ಎಂದು ಎಂಪಿ ರೇಣುಕಾಚಾರ್ಯ ನುಡಿದರು. ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸಂಫುಟ ಪುನರಚನೆಗೆ ಗುಜರಾತ್ ಮಾಡಲ್ ಮಾಡ್ತಾರೋ ಕರ್ನಾಟಕ ಮಾಡಲ್ ಮಾಡ್ತಾರೋ. ಹೈಕಮಾಂಡ್ ಏನು ಮಾಡುತ್ತೆ ನೋಡೋಣ ಎಂದರು. : - --