ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಯೋಜನೆ ಶೀಘ್ರ ಅನುಷ್ಠಾನ : ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ ಬೆಂಗಳೂರು, ಜ.20, 2022 : (.. ) ಕೇಂದ್ರದ ಸರ್ಕಾರದ ಸಹಭಾಗಿತ್ವದೊಂದಿಗೆ ಅಂದಾಜು 50 ಕೋಟಿ ರೂ ವೆಚ್ಚದಲ್ಲಿ ಮೈಸೂರಿನ ಬೆಳವಾಡಿ ಬಳಿ ನಿರ್ಮಾಣವಾಗಲಿರುವ ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಅನುಷ್ಠಾನಗೊಳಿಸುವ ಸಂಬಂಧ ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ ಅವರು ಕ್ಲಸ್ಟರ್ ನ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ಕೇಂದ್ರ ಸರ್ಕಾರದ ಸಹಭಾಗಿತ್ವದ ಈ ಮಹತ್ವಾಕಾಂಕ್ಷೆಯ ಈ ಯೋಜನೆ ಭೂಮಿಯ ಗೊಂದಲದಿಂದ ಸಾಕಷ್ಟು ವಿಳಂಬವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಮನ್ವಯದ ಕಾರಣ, ಪ್ರಸ್ತುತ ಈ ಯೋಜನೆ ಅನುಷ್ಠಾನಕ್ಕೆ ಇದ್ದ ಅಡ್ಡಿ ಆತಂಕಗಳು ಬಗೆಹರಿದಿವೆ ಎಂದರು.ಕೇಂದ್ರ ಸರ್ಕಾರ ಈಗ ಮೊದಲ ಕಂತಿನ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಅಧಿಕಾರಿಗಳು ಮತ್ತು ಕ್ಲಸ್ಟರ್ ನ ಸದಸ್ಯರು ಕಾರ್ಯಪ್ರವೃತರಾಗಿ ಶೀಘ್ರ ಕಾಮಗಾರಿ ಆರಂಭಿಸುವಂತೆ ಸಚಿವರು ಸೂಚಿಸಿದರು. ಈ ವೇಳೆ ಮೈಸೂರು ಸಂಸದರು , ಕೈಮಗ್ಗ ಅಭಿವೃದ್ಧಿ ಮತ್ತು ಜವಳಿ ಇಲಾಖೆ ಆಯುಕ್ತ ಕುಮಾರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. : ---------