ಹುರಳಿ ಸೊಪ್ಪು ತಂದ ಆತಂಕ: ರಸ್ತೆ ಮಧ್ಯೆ ಅರ್ಧ ಗಂಟೆ ನಿಂತ ಆಂಬುಲೆನ್ಸ್. ಮೈಸೂರು,ಜನವರಿ,19,2022(..):ಹುರಳಿ ಸೊಪ್ಪು ಟೈರಿಗೆ ಸುತ್ತಿಕೊಂಡು ಗರ್ಭಿಣಿ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ರಸ್ತೆ ಮಧ್ಯೆ ಅರ್ಧ ಗಂಟೆ ನಿಂತ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೂಡ್ಲಾಪುರ ಬಳಿ ಈ ಘಟನೆ ನಡೆದಿದೆ. ನಂಜನಗೂಡು ತಾಲೂಕು ತರದಲೆ ಗ್ರಾಮದ ಗರ್ಭಿಣಿಯನ್ನ ಆಂಬ್ಯಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ಮಧ್ಯೆ ಕೂಡ್ಲಾಪುರ ಬಳಿ ರೈತರು ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡುತ್ತಿದ್ದರು. ಈ ವೇಳೆ ಹುರಳಿ ಸೊಪ್ಪು ಆ್ಯಂಬುಲೆನ್ಸ್ ಟೈರಿಗೆ ಸುತ್ತಿಕೊಂಡು, ವಾಹನ ಮುಂದಕ್ಕೆ ಹೋಗಲಾರದೆ ಡ್ರೈವರ್ ಪರದಾಡಿದ್ದಾರೆ. ಈ ಸಮಯಲದಲ್ಲಿ ಸ್ಥಳೀಯರ ನೆರವಿನೊಂದುಗೆ ಹುರಳಿ ಸೊಪ್ಪು ತೆರವುಗೊಳಿಸಲಾಯಿತು. ಅರ್ಧ ಗಂಟೆ ಕಾರ್ಯಾಚರಣೆ ನಂತರ ಆಂಬುಲೆನ್ಸ್ ಮುಂದೆ ಸಾಗಿದ ಘಟನೆ ನಡೆಯಿತು. : – – – -