ಪವರ್ ಸ್ಟಾರ್ ಅಪ್ಪು ಹುಟ್ಟುಹಬಕ್ಕೆ ‘ಜೇಮ್ಸ್’ ರಿಲೀಸ್ !? ಬೆಂಗಳೂರು, ಜನವರಿ 19, 2021 (..):ನಿರ್ದೇಶಕ ಚೇತನ್ ‘ಜೇಮ್ಸ್’ ಸಿನಿಮಾವನ್ನು ಪುನೀತ್ ಹುಟ್ಟುಹಬ್ಬಕ್ಕೆ ರಿಲೀಸ್ ಮಾಡಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ. ‘ಜೇಮ್ಸ್’ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗೇ ಆಗುತ್ತೆ. ಕೊರೊನಾ ಸೋಂಕಿನಿಂದ ತೊಡಕಾಗಿ ಸಿನಿಮಾ ಕೆಲಸಕ್ಕೆ ಅಡ್ಡಿಯಾದರೆ ಮಾತ್ರ ವಿಳಂಬ ಆಗುವ ಸಾಧ್ಯತೆಗಳಿವೆ. ಚೇತನ್ ಈಗಾಗಲೇ ಸಿನಿಮಾದ ಕೆಲಸಗಳನ್ನು ವೇಗವಾಗಿ ಮುಗಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಪ್ಯಾಚ್ ವರ್ಕ್ ಮುಗಿದಿದ್ದು, ಸಿನಿಮಾ ಕಲರಿಂಗ್ ಕೆಲಸ ಶುರುವಾಗಿದೆ. ಸಂಕ್ರಾಂತಿಗೇ ಒಂದು ಪೋಸ್ಟರ್ ರಿಲೀಸ್ ಮಾಡಿದ್ದ ತಂಡ ಟೀಸರ್, ಟ್ರೈಲರ್ ಯಾಕೆ ರಿಲೀಸ್ ಮಾಡುತ್ತಿಲ್ಲ ಎಂಬ ಕುತೂಹಲವಿದೆ. ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ದಿನವೇ ನೇರವಾಗಿ ಚಿತ್ರಮಂದಿರಕ್ಕೆ ರಿಲೀಸ್ ಆಗುತ್ತಿದೆ ಅಂತ ಸಿನಿಮಾ ಮಂದಿ ಹೇಳುತ್ತಿದ್ದಾರೆ. ಆದರೆ, ಅಧಿಕೃತವಾಗಿ ನಿರ್ದೇಶಕ ಚೇತನ್ ಅಥವಾ ಚಿತ್ರತಂಡ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.