ಕೋವಿಡ್ ನಿಯಮ ಉಲ್ಲಂಘನೆ ಆರೋಪ; ಬಿಜೆಪಿ ನಾಯಕರ ವಿರುದ್ಧ ಸಿಎಸ್ ಗೆ ಕಾಂಗ್ರೆಸ್ ನಿಯೋಗ ದೂರು. ಬೆಂಗಳೂರು,ಜನವರಿ,18,2022(..):ಕೋವಿಡ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಹಲವು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಿಯೋಗ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದೆ. ದೂರು ನೀಡಿದ ಬಳಿಕ ಮಾತನಾಡಿದ ಎಂಎಲ್ ಸಿ ಸಲೀಂ ಆಹ್ಮದ್, ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಆಗಬೇಕು. ಹಲವು ಸಚಿವರು, ಅಧಿಕಾರಿಗಳಿಂದ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ಕೇಸ್ ದಾಖಲಿಸುವಂತೆ ಕೆಪಿಸಿಸಿ ಅಧ್ಯಕ್ಷರು ಬರೆದ ಪತ್ರವನ್ನ ನೀಡಿದ್ದೇವೆ ಎಂದರು. ಪ್ರತಿಭಟನೆ ಜನರ ಮೂಲಭೂತ ಹಕ್ಕು ಸರ್ಕಾರದ ನಿಯಮ ಪಾಲಿಸಲು ಬೇಧಭಾವ ಮಾಡಬಾರದು. ಎಲ್ಲರಿಗೂ ಸಮಾನವಾದ ಶಿಕ್ಷ ನೀಡಲು ಅವಕಾಶ ಇರಬೇಕು. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘನೆ ಕೇಸ್ ನಲ್ಲಿ ಸುಮಾರು 10 ಪ್ರಕರಣಗಳನ್ನ ಸಿಎಸ್ ಗಮನಕ್ಕೆ ತಂದಿದ್ದೇವೆ ಎಂದರು. : – – - –