ಸಿಎಂ ಗೃಹ ಕಚೇರಿ ಮುಂದೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಏಕಾಂಗಿ ಪ್ರತಿಭಟನೆ. ಬೆಂಗಳೂರು,ಜನವರಿ,18,2022(..):ಹೊಳೇನರಸೀಪುರ ಸರ್ಕಾರಿ ಪದವಿ ಕಾಲೇಜಿಗೆ ಪಿಜಿ ಕೋರ್ಸ್ ನೀಡುವಂತೆ ಒತ್ತಾಯಿಸಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಿಎಂ ಗೃಹ ಕಚೇರಿ ಎದುರು ಏಕಾಂಕಿ ಪ್ರತಿಭಟನೆ ನಡೆಸಿದರು. ಹೊಳೇನರಸೀಪುರ ಸರ್ಕಾರಿ ಪದವಿ ಕಾಲೇಜಿಗೆ ಪಿಜಿ ಕೋರ್ಸ್ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಅಲ್ಲದೆ ಖಾಸಗಿ ಕಾಲೇಜಿಗೆ ಪಿಜಿ ಕೋರ್ಸ್ ನೀಡಲಾಗುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಆರೋಪ ಮಾಡಿದ್ದಾರೆ. ಹಾಗೆಯೇ ಪಿಜಿ ಕೋರ್ಸ್ ಗೆ ಪ್ರಧಾನಿ ಕಾರ್ಯದರ್ಶಿ ಮಂಜೂರು ಮಾಡಿದ್ದರು ಆದರೆ ಸಚಿವ ಅಶ್ವಥ್ ನಾರಾಯಣ್ ಆದೇಶಕ್ಕೆ ತಡೆ ನೀಡಿದ್ದಾರೆ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಹೆಚ್.ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. : - -