ಪ್ರಯಾಣಿಕರೇ ಗಮನಿಸಿ: ರೈಲ್ವೆ ಸೇವೆಯಲ್ಲಿ ವ್ಯತ್ಯಯ ಬೆಂಗಳೂರು, ಜನವರಿ 16, 2022 (..):ಕೆಲ ಕಾಮಗಾರಿಗಳು ನಡೆಯುತ್ತಿರುವುದರಿಂದ ರೈಲು ಸೇವೆಯಲ್ಲಿ ಕೆಲ ವ್ಯತ್ಯಯವಾಗಲಿದೆ. ಮಲುಗೂರು ರೈಲ್ವೆ ನಿಲ್ದಾಣದ ರೈಲ್ವೆ ಗೇಟ್ ಸಂಖ್ಯೆ 64 ರಲ್ಲಿ ದಿನಾಂಕ 17.01.2022, 18.01.2022, 20.01.2022 ಮತ್ತು 21.01.2022 ರಂದು ರಸ್ತೆ ಕೆಳ ಸೇತುವೆಗಾಗಿ ಸೆಗ್ಮೆಂಟಲ್ ಬಾಕ್ಸ್‌ ಗಳ ಅಳವಡಿಕೆ ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಮಾಡಲಾಗಿದೆ. ರೈಲುಗಳ ಸೇವೆ ರದ್ದು: ರೈಲಿನ ಮಾರ್ಗ ಬದಲಾವಣೆ: .ರೈಲಿನ ನಿಯಂತ್ರಣ / ರೈಲು ಸೇವೆಯ ವೇಳಾಪಟ್ಟಿಯ ಮರುಹೊಂದಾಣಿಕೆ: ಯಶವಂತಪುರ ಯಾರ್ಡ್ ನಲ್ಲಿ ದಿನಾಂಕ 21.01.2022 ರಂದು ಇಂಜಿನಿಯರಿಂಗ್ ಕೆಲಸಕ್ಕೆ ಸಂಬಂಧಿತ (ಥಿಕ್ ವೆಬ್ ಸ್ವಿಚ್‌ಗಳ) ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಮಾಡಲಾಗಿದೆ. ರೈಲಿನ ನಿಯಂತ್ರಣ: ರೈಲು ಸೇವೆಯ ವೇಳಾಪಟ್ಟಿಯ ಮರುಹೊಂದಾಣಿಕೆ: .ರೈಲು ಸೇವೆಯ ಭಾಗಶಃ ರದ್ದತಿ ಬೆಂಗಳೂರು ರೈಲ್ವೆ ಯಾರ್ಡ್‌ನಲ್ಲಿ ದಿನಾಂಕ 19.01.2022 ಹಾಗೂ 26.01.2022 ರಂದು ಇಂಜಿನಿಯರಿಂಗ್ ಕೆಲಸಕ್ಕೆ ಸಂಬಂಧಿತ ಲೈನ್ ಬ್ಲಾಕ್‌ ಇರುವ ನಿಮಿತ್ತ ದಿನಾಂಕ 18.01.2022 ಮತ್ತು 25.01.2022 ರಂದು ಮೈಸೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ.06560 ಮೈಸೂರು – ಕೆ.ಎಸ್‌.ಆರ್ ಬೆಂಗಳೂರು ವಿಶೇಷ ಮೆಮು ರೈಲಿನ ಸೇವೆ ಕೆಂಗೇರಿ ಹಾಗೂ ಕೆ.ಎಸ್.ಆರ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುವುದು. ಆ ಕಾರಣ ಈ ದಿನಾಂಕಗಳಂದು ಮೈಸೂರು ನಿಲ್ದಾಣದಿಂದ ಹೊರಟ ರೈಲು ಕೆಂಗೇರಿ ನಿಲ್ದಾಣದಲ್ಲಿ ಕೊನೆಗೊಳ್ಳುವುದು ಎಂದು ಮಾಹಿತಿ ನೀಡಿದ್ದಾರೆ.