ಮೈಸೂರಿನಲ್ಲಿ ಮಹಿಳೆಯ ಹತ್ಯೆ: ನಾಲ್ವರು ಆರೋಪಿಗಳು ಅಂದರ್. ಮೈಸೂರು,ಜನವರಿ,14,2022(..):ಆಸ್ತಿ ವಿಚಾರದಲ್ಲಿ ಸಂಬಂಧಿಕರ ನಡುವೆ ಗಲಾಟೆ ನಡೆದು ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಹಿನಕಲ್‌ನ ನಾಯಕರ ಬೀದಿಯಲ್ಲಿ ಈ ಘಟನೆ ನಡೆದಿದೆ. ಹಿನಕಲ್‌ ನ ದಾಸನಾಯಕ ಎಂಬುವರ ಪತ್ನಿ ಸಾಕಮ್ಮ (50) ಕೊಲೆಯಾದ ಮಹಿಳೆ. ಮನು, ಗೋವಿಂದನಾಯಕ, ಕಿರಣ್, ಲಕ್ಷ್ಮೀ ಬಂಧಿತ ಆರೋಪಿಗಳು ಮತ್ತೊಬ್ಬ ಮನೋಜ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಚಾಕುವಿನಿಂದ ಕುತ್ತಿಗೆ ಕೊಯ್ದು ಸಾಕಮ್ಮನನ್ನ ಕೊಲೆ ಮಾಡಲಾಗಿದೆ. ಈ ಕುರಿತು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. : – – -